ಸುನ್ನೀ ಆದರ್ಶ ಸಮ್ಮೇಳನದ ಪೋಸ್ಟರ್ ಬಿಡುಗಡೆ



(ನ್ಯೂಸ್ ಕಡಬ) newskadaba.com, ಆತೂರು, ಡಿ.13   ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಮಡಿಕೇರಿ ಗಾಂಧಿ ಮೈದಾನ ದಲ್ಲಿ ಡಿಸೆಂಬರ್ 13 ರಂದು ಬೃಹತ್ ಸುನ್ನೀ ಆದರ್ಶ ಸಮ್ಮೇಳನದ ಪೋಸ್ಟರ್ ಬಿಡುಗಡೆಯನ್ನು ಆತೂರು ಮದ್ರಸ ಮೇನೇಜ್ಮೆಂಟ್ ಕೋಶಾಧಿಕಾರಿ ಮತ್ತು ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ಅಧ್ಯಕ್ಷರಾದ ಹೈದರ್ ಕಲಾಯಿ ಜುಮಾ ನಮಾಜ್ ನಂತರ ಆತೂರು ಮುಹ್ಯುದ್ದೀನ್ ಜುಮಾ ಮಸೀದಿಯಲ್ಲಿ ಬಿಡುಗಡೆ ಮಾಡಿದರು.







ಕಾರ್ಯಕ್ರಮದಲ್ಲಿ ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ಇದರ ಖತೀಬರು ಅಬೂಹಫೀಝ ಕೆ.ಎಂ.ಎಚ್.ಫಾಝಿಲ್ ಹನೀಫಿ, ಇಬ್ರಾಹಿಂ ಮುಸ್ಲಿಯಾರ್, ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ಇದರ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು, ಅಬ್ದುಲ್ ರಝಾಕ್ ಹೇಂತಾರು, ರಝಾಕ್ ಮುಬಾರಕ್, ಗಫ್ಹರ್ ಹೇಂತಾರು, ಪಿ ಎ ಮರ್ದಾಳ ಮತ್ತಿತರು ಉಪಸ್ಥಿತರಿದ್ದರು.






error: Content is protected !!
Scroll to Top