ಕಡಬದ ಸೌಮ್ಯಾ ಪ್ರಸಾದ್ ಗೆ ಡಾಕ್ಟರೇಟ್

(ನ್ಯೂಸ್ ಕಡಬ) newskadaba.com ಕಡಬ, ನ.02. ಮಂಗಳೂರಿನ ಕೆಎಂಎಫ್ ಡೈರಿಯ ಗುಣನಿಯಂತ್ರಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೌಮ್ಯಾ ಪ್ರಸಾದ್ ಕೋಡಿಂಬಾಳ ಇವರು ಮಂಗಳೂರು ವಿವಿಯ ಪ್ರೊಫೆಸರ್ ಭೋಜ ಪೂಜಾರಿಯವರ ಮಾರ್ಗದರ್ಶನದಲ್ಲಿ ‘ಸಿಂಥೆಟಿಕ್ ಆಂಡ್ ಬಯೋಲಾಜಿಕಲ್ ಸ್ಟಡೀಸ್ ಆನ್ ಸಮ್ ನೈಟ್ರೋಜನ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಡಾಕ್ಟರೇಟ್ ಪದವಿ ನೀಡಿದೆ.

ಕಡಬದ ಕೊಡಿಂಬಾಳ ನಿವಾಸಿ ನಿವೃತ್ತ ಶಿಕ್ಷಕ ವಸಂತಗೌಡ ಪಡೆಜ್ಜಾರು ಮತ್ತು ಲಲಿತಾ ದಂಪತಿಗೆ ಪುತ್ರಿಯಾಗಿರುವ ಇವರು ಮಂಗಳೂರಿನ ಮಾಲಾಡಿ ನಿವಾಸಿ ಸಿವಿಲ್ ಇಂಜಿನಿಯರ್ ಪ್ರಸಾದ್ ಕೆ.ಎಂ. ಕಡಬ ಅವರ ಪತ್ನಿ

Also Read  ಧರ್ಮಸ್ಥಳ :ಗಾಳಿ ಮಳೆಗೆ ರಸ್ತೆಗೆ ಉರುಳಿದ ಮರ

error: Content is protected !!
Scroll to Top