ನಾಪತ್ತೆಯಾದ ಬಾಲಕ



(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ,  ನ.1    ಪುತ್ತೂರಿನ ಹಾಸ್ಟೆಲ್ ನಿಂದ ಅಸೌಖ್ಯದ ನಿಮಿತ್ತ ಮನೆಗೆ ಬಂದ ಬಾಲಕ ಹಾಸ್ಟೆಲ್ ಗೆ ಹೋಗುತ್ತೇನೆಂದು ಮನೆಯಿಂದ ಹೊರಟು ಹೋದವನು ಹಾಸ್ಟೇಲ್ ಗೂ ಹೋಗದೇ, ಮನೆಗೂ ಬಾರದೇ ಕಾಣೆಯಾಗಿದ್ದಾನೆ.








ಶ್ರೀಮತಿ ಮೀನಾಕ್ಷಿಯವರ ಪುತ್ರ ಮನೋಹರ ಸಿ (14 ವರ್ಷ) ಪುತ್ತೂರು ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲ್ ನಲ್ಲಿ ಕಲಿಯುತ್ತಾ ಅಲ್ಲೆ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದವನು ದಿನಾಂಕ 18.10.2019 ರಂದು ಹಾಸ್ಟೆಲ್ ನಿಂದ ಮನೆಗೆ ಬಂದಿದ್ದು, 31.10.2019 ರಂದು ಹಾಸ್ಟೆಲ್ ಗೆ ಹೋಗುತ್ತೆಂದು ಮನೆಯಿಂದ ಹೋದವನು ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top