ಕರಾವಳಿಯಲ್ಲಿ ಮುಂದುವರಿದ ಗುಡುಗು ಸಹಿತ ಭಾರೀ ಮಳೆ ➤ ಹಲವೆಡೆ ಹಾನಿ, ಆರೆಂಜ್ ಅಲೆರ್ಟ್ ಘೋಷಣೆ



(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.18. ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಹಿಂಗಾರು ಮಳೆ ಸುರಿಯುತ್ತಿದ್ದು, ಕೆಲವೆಡೆ ಹಾನಿ ಸಂಭವಿಸಿದೆ.







ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರಬೆಟ್ಟು ಎಂಬಲ್ಲಿನ ನಿವಾಸಿ ಬುದ್ದ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸಿಡಿಲ ಆರ್ಭಟಕ್ಕೆ ಮನೆಯ ಹಂಚು ಹಾರಿಹೋಗಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ಉಪಕರಣಗಳು ಕೆಟ್ಟು ಹೋಗಿವೆ. ಮನೆಯ ಪೀಠೋಪಕರಣಗಳು, ಕಿಟಕಿ, ಬಾಗಿಲು, ಟಿವಿ, ಡಿಶ್ ಆಂಟೆನಾ ಮೊದಲಾದ ಸಾಮಾಗ್ರಿಗಳು ಹಾನಿಗೊಂಡಿವೆ. ವಿದ್ಯುತ್ ಮಾಪಕ ಸಿಡಿದು ಚೂರಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜು ನಡೆಸಿದ್ದಾರೆ.






error: Content is protected !!
Scroll to Top