ಸುಳ್ಯ ಅಪಘಾತದಲ್ಲಿ ಮೃತಪಟ್ಟವರ ವಿವರ ಪತ್ತೆ ➤ ತಂದೆ ಹಾಗೂ ಮೂವರು ಪುತ್ರರು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ



(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ವಿವರ ತಿಳಿದುಬಂದಿದ್ದು, ಮಡಿಕೇರಿಯ ತಂದೆ ಹಾಗೂ ಮೂವರು ಮಕ್ಕಳೆಂದು ಗುರುತಿಸಲಾಗಿದೆ.







ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಸುಳ್ಯದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಈಚರ್ ಲಾರಿಯ ಮಧ್ಯೆ ಸುಳ್ಯದ ಅಡ್ಕಾರ್ ಸಮೀಪದ ಮಾವಿನಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಡಿಕೇರಿ ನಾಪೋಕ್ಲು ಕೊಟ್ಟಮುಡಿ ಎಂಬಲ್ಲಿನ ಹಸೈನಾರ್ ಹಾಜಿ ಹಾಗೂ ಅವರ ಮಕ್ಕಳಾದ ಇಬ್ರಾಹಿಂ, ಅಬ್ದುಲ್ ರಹಿಮಾನ್ ಮತ್ತು ಹಾರೀಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆ ಪ್ರಯಾಣಿಸುತ್ತಿದ್ದ ಉಮ್ಮರ್ ಫಾರೂಕ್ ಎಂಬವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.






error: Content is protected !!
Scroll to Top