ಇನ್ಮುಂದೆ ಕಡಬದಲ್ಲಿ ಪ್ರತೀ ತಿಂಗಳು ಲೋಕಯುಕ್ತರಿಂದ ಸಾರ್ವಜನಿಕ ದೂರು ಸ್ವೀಕಾರ ➤ ಕಡಬದಲ್ಲಿ ಅಹವಾಲು ಸ್ವೀಕರಿಸಿ ಲೋಕಾಯುಕ್ತ ಡಿವೈಎಸ್ಪಿ ಹೇಳಿಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.18. ನೂತನವಾಗಿ ಉದ್ಘಾಟನೆಗೊಂಡ ಕಡಬ ತಾಲೂಕಿನಲ್ಲಿ ಇನ್ಮುಂದೆ ಪ್ರತೀ ತಿಂಗಳು ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕ ದೂರುಗಳ ಸ್ವೀಕಾರ ಸಭೆ ನಡೆಯಲಿದೆ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್ ಹೇಳಿದರು.

 

ಅವರು ಮಂಗಳೂರು ವಿಭಾಗದ ಲೋಕಾಯುಕ್ತ ಪೋಲಿಸರಿಂದ ಬುಧವಾರದಂದು ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ದೂರುಗಳನ್ನು ಸ್ವೀಕರಿಸಿ ಮಾತನಾಡಿದರು. ಕಡಬ ತಾಲೂಕು ನೂತನವಾಗಿ ಅನುಷ್ಠಾನಕ್ಕೆ ಬಂದಿರುವುದರಿಂದ ಇಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕ ದೂರು ಸ್ವೀಕಾರ ನಡೆದಿರಲಿಲ್ಲ. ಆದರೆ ಇನ್ಮುಂದೆ ಪ್ರತೀ ತಿಂಗಳು ದೂರು ಸ್ವೀಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು‌.

Also Read  ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ ಹಾಗೂ ಜವಾಹರ್ ಲಾಲ್ ಜನ್ಮ ದಿನಾಚರಣೆ

ಈ ಸಂದರ್ಭದಲ್ಲಿ ಕಡಬ ತಾಲೂಕು ವ್ಯಾಪ್ತಿಯ ಹಲವು ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದರು. ವೇದಿಕೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಭಾರತಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಉಪಸ್ಥಿತರಿದ್ದರು.

error: Content is protected !!
Scroll to Top