ನೆಟ್ಟಣ: ಅಪರಿಚಿತ ಕಾರು ಢಿಕ್ಕಿ ➤ ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಅಪರಿಚಿತ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಸೋಮವಾರದಂದು ನಡೆದಿದೆ.

ಗಾಯಾಳು ಮಹಿಳೆಯನ್ನು ನೆಟ್ಟಣ ನಿವಾಸಿ ಸುಮತಿ (48) ಎಂದು ಗುರುತಿಸಲಾಗಿದೆ. ಸುಮತಿಯವರು ಸೋಮವಾರದಂದು ನೆಟ್ಟಣ ಡಿಪೋ ಬಳಿ ರಸ್ತೆ ಬದಿಯಲ್ಲಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬಂದ ಅಪರಿಚಿತ ಕಾರೊಂದು ಮಹಿಳೆಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ‌. ಘಟನೆಯಲ್ಲಿ ಮಹಿಳೆಯ ತಲೆಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಸಾಮಾಜಿಕ ಮುಂದಾಳು ನೆಟ್ಟಣದ ಪ್ರಕಾಶ್ ಮಹಿಳೆಯನ್ನು ತನ್ನ ವಾಹನದಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಲಂಕಾರಿನ 108 ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

Gems

Scroll to Top