ಕಬಕ: ಕಾಲೇಜು ಬಸ್ ಹಾಗೂ ಕುರಿ ಸಾಗಾಟದ ಲಾರಿ ನಡುವೆ ಢಿಕ್ಕಿ ➤ ಅಪಾರ ಕುರಿಗಳ ಸಾವು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.06. ಕಾಲೇಜು ಬಸ್ ಹಾಗೂ ಕುರಿ ಸಾಗಾಟದ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಐವರು ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಕಬಕ ಬಳಿ ಶುಕ್ರವಾರ ಸಂಜೆ ನಡೆದಿದೆ.

 


ಮಂಗಳೂರಿನಿಂದ ಪುತ್ತೂರು ಕಡೆಗೆ ಕುರಿ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಕುಂಬ್ರ ಮರ್ಕಝಲ್ ಹುದಾ ಮಹಿಳಾ ಕಾಲೇಜು ಬಸ್ಸಿನ ಮಧ್ಯೆ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಲಾರಿಯ ಒಂದು ಪಾರ್ಶ್ವವೇ ಕುಸಿದಿದ್ದು, ಲಾರಿಯಲ್ಲಿದ್ದ ಹಲವಾರು ಕುರಿಗಳು ಮೃತಪಟ್ಟಿವೆ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Gems

Scroll to Top