ಯುವತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಆಶಿಕಾ (ಪ್ರಾಯ 22 ವರ್ಷ) ಎಂಬವರು ಜುಲೈ 16 ರಂದು ಕಂಕನಾಡಿ ಬಳಿಯಲ್ಲಿರುವ ಬ್ರಿಲ್ಲಿಯಂಟ್ ಲಾಡ್ಜಿಂಗ್ ಹೌಸ್ ಎಂಬ ಪಿ.ಜಿಯಿಂದ ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಯುವತಿಯ ಚಹರೆ ಇಂತಿವೆ : ಎಣ್ಣೆ ಕಪ್ಪು ಮೈ ಬಣ್ಣ, ಎತ್ತರ 4.5 ಅಡಿ, ತೆಳ್ಳನೆ ಶರೀರ, ತಿಳಿದಿರುವ ಭಾಷೆ ಕನ್ನಡ, ಇಂಗ್ಲಿಷ್, ತುಳು, ಬ್ಯಾರಿ, ಮಲಯಾಳಂ ಮಾತಾನಾಡುತ್ತಾರೆ.
ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು ಮಂಗಳೂರು ಪೂರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 2220520, ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 2220800-2220801 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

 

Scroll to Top