ಮೂಡಬಿದ್ರೆ ಪೊಲೀಸ್ ವಸತಿಗೃಹ ಕಟ್ಟಡ ವಿಲೇವಾರಿ ➤ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.13.ಮೂಡಬಿದ್ರೆ ಪೊಲೀಸ್ ಠಾಣೆಯ ಬ್ಲಾಕ್ 1 ಮತ್ತು ಬ್ಲಾಕ್ 2 ರಲ್ಲಿರುವ ಹಳೆಯ ಒಟ್ಟು 13 ವಸತಿಗೃಹಗಳನ್ನು ನೆಲಸಮಗೊಳಿಸಿ ಅವುಗಳ ಸಾಮಾಗ್ರಿಗಳನ್ನು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಆ ಸಾಮಾಗ್ರಿಗಳನ್ನು ಬಹಿರಂಗವಾಗಿ ಹರಾಜು ಮಾಡಲಾಗುವುದು.

ಜುಲೈ 23 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮುಖಾಂತರ ವಿಲೇವಾರಿ ಮಾಡಲಾಗುವುದು. ಟೆಂಡರ್ ಸಲ್ಲಿಸಲು ಜು.19 ಕಡೆಯ ದಿನ. ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

Scroll to Top