ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಮಂಗಳೂರು ತಾಲೂಕಿನ ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ನೈಮಾ(23) ಎಂಬವರು ಜುಲೈ 1 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ. ಪ್ರಕರಣ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಕಾಣೆಯಾದ ಯುವತಿಯ ಚಹರೆ ಇಂತಿವೆ: ನೈಮಾ ಪ್ರಾಯ 23 ವರ್ಷ, 5.6 ಅಡಿ ಎತ್ತರ, ದೃಢಕಾಯ ಶರೀರ, ದುಂಡು ಮುಖ, ಬಿಳಿಮೈಬಣ್ಣ, ಕೆಂಪು ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು, ತಿಳಿದಿರುವ ಭಾಷೆ ಕನ್ನಡ, ಬ್ಯಾರಿ, ತುಳು, ಕಿವಿಯಲ್ಲಿ ಬೆಂಡೋಲೆ ಮತ್ತು ಬಲಕೈ ಉಂಗುರ ಬೆರಳಲ್ಲಿ ಬೆಳ್ಳಿ ಉಂಗುರ ಧರಿಸಿದ್ದರು.ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0824-2290533, 9480805359, 9480805332 ಅಥವಾ ಮಂಗಳೂರು ಕಂಟ್ರೋಲ್ ರೂಮ್ 0824-2220800 ಇಲ್ಲಿಗೆ ಮಾಹಿತಿ ನೀಡಬೇಕು ಎಂದು ಠಾಣಾಧಿಕಾರಿ ಮುಲ್ಕಿ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ? ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು

error: Content is protected !!
Scroll to Top