ಕತರ್ ಗೆ ಹೋಗಲು ಇನ್ಮುಂದೆ ವೀಸಾ ಬೇಡ ► ಉಚಿತ ಪ್ರವೇಶ ನೀಡಿದ ಕತರ್ ಸರಕಾರ

(ನ್ಯೂಸ್ ಕಡಬ) newskadaba.com ದೋಹಾ ಕತರ್, ಆ.09. ಪ್ರವಾಸೋದ್ಯಮ ಮತ್ತು ವಾಯುಯಾನಕ್ಕೆ ಒತ್ತು ನೀಡಿ ಪ್ರವಾಸಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕತರ್ ದೇಶವು ಭಾರತ ಸೇರಿದಂತೆ 80 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶಿಸಲು ಅನುಮತಿ ಘೋಷಿಸಿದೆ.

ಯೂರೋಪ್ ನ ದೇಶಗಳು, ಭಾರತ, ಲೆಬನಾನ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ಬ್ರಿಟನ್, ಕೆನಡ ಸೇರಿದಂತೆ 80 ದೇಶಗಳ ಪ್ರಜೆಗಳು ಇನ್ಮುಂದೆ ಕತರ್ ದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಕೈಯಲ್ಲಿ ಇದ್ದರೆ ಸಾಕಾಗುತ್ತದೆ. ನೇರವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಬಹುದಾಗಿದೆ‌.

Also Read  ಮರದಿಂದ ತಯಾರಿಸಿದ ಉಪಗ್ರಹ ಲಿಗ್ನೋಸ್ಯಾಟ್ ಬಾಹ್ಯಾಕಾಶಕ್ಕೆ ಉಡಾವಣೆ

ಎರಡು ತಿಂಗಳ ಹಿಂದೆ ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ಹಾಗೂ ಯುಎಇ ಸೇರಿದಂತೆ ಕೆಲವು ರಾಷ್ಟ್ರಗಳು ಕತರ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿ ನಿರ್ಬಂಧ ಹೇರಿತ್ತು. ಒಂದು ತಿಂಗಳ ಕಾಲ ವೀಸಾ ಇಲ್ಲದೆ ಕತರ್ ದೇಶದಲ್ಲಿ ವಾಸಿಸಲು ಅವಕಾಶ ನೀಡಲಾಗಿದ್ದು, ಬೇಕಾದರೆ ಒಂದು ತಿಂಗಳು ಮುಂದೂಡಲು ಅವಕಾಶ ಕಲ್ಪಿಸಲಾಗಿದೆ.

error: Content is protected !!
Scroll to Top