ಅಲ್ಪಸಂಖ್ಯಾತರ ಅರ್ಹ ಅಭ್ಯರ್ಥಿಗಳಿಗೆ ಕಾನೂನು ತರಬೇತಿ ➤ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.20.ಅಲ್ಪಸಂಖ್ಯಾತರ ಅರ್ಹ ಅಭ್ಯರ್ಥಿಗಳಿಗೆ 2019-20ನೇ ಸಾಲಿಗೆ ನಾಲ್ಕು ವರ್ಷದ ಅವಧಿಗೆ ಕಾನೂನು ತರಬೇತಿ ಪಡೆಯಲಿಚ್ಛಿಸುವ ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಅಭ್ಯರ್ಥಿಯು ಬಾರ್ ಕೌನ್ಸಿಲ್‍ನಲ್ಲಿ ನೊಂದಾಯಿತರಾದ ಕಾನೂನು ಪದವೀಧರರಾಗಿದ್ದು, ಕುಟುಂಬದ ವಾರ್ಷಿಕ ಆದಾಯವು ರೂ. 3.50 ಲಕ್ಷವನ್ನು ಮೀರಿರಬಾರದು. 30 ವರ್ಷದೊಳಗಿನ ವಯೋಮಿತಿಯವರಾಗಿದ್ದು, ಅಂತಿಮ ಕಾನೂನು ಪದವಿಯನ್ನು ಪೂರ್ಣಗೊಳಿಸಿ 2 ವರ್ಷ ಮೀರಿರಬಾರದು. ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಚೇರಿ, ಮೌಲನಾ ಅಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿ ಪಡೆದು ದಾಖಲೆ ಪತ್ರದ ಜೊತೆಗೆ ಜುಲೈ 5 ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಗಣರಾಜ್ಯೋತ್ಸವ : ಸರಕಾರಿ ನೌಕರರ ಹಾಜರಾತಿ  ಕಡ್ಡಾಯ

error: Content is protected !!
Scroll to Top