ದ.ಕ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ➤ಸಮಗ್ರ ಕೃಷಿ ಅಭಿಯಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಸಮಗ್ರ ಕೃಷಿ ಅಭಿಯಾನ ಸುಳ್ಯ ಹೋಬಳಿಯಲ್ಲಿ ಜೂನ್ 24 ರಿಂದ ಜೂನ್ 26 ರವರೆಗೆ ಹಾಗೂ ಪಂಜ ಹೋಬಳಿಯಲ್ಲಿ ಜೂನ್ 27 ರಿಂದ ಜೂನ್ 29 ರವರೆಗೆ ನಡೆಯಲಿದೆ.








ಸುಳ್ಯ ಹೋಬಳಿಯ ಕೃಷಿ ಅಭಿಯಾನವನ್ನು ಜೂನ್ 24 ರಂದು ಪೂರ್ವಾಹ್ನ 10 ಗಂಟೆಗೆ ಸುಳ್ಯದ ಎಪಿಎಮ್‍ಸಿ ಪ್ರಾಂಗಣದಲ್ಲಿ ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕ ಎಸ್ ಅಂಗಾರ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ ಇವರು ವಹಿಸಲಿದ್ದಾರೆ.ಪಂಜ ಹೋಬಳಿಯ ಕೃಷಿ ಅಭಿಯಾನವನ್ನು ಜೂನ್ 27 ರಂದು ಪೂರ್ವಾಹ್ನ 10.30 ಗಂಟೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‍ನಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಆಶಾ ತಿಮ್ಮಪ್ಪ ಇವರು ಉದ್ಘಾಟಿಸಲಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷರು ಶುಭದಾ ಎಸ್ ವೈ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.






error: Content is protected !!
Scroll to Top