ವಾಹನಗಳ ಮಧ್ಯೆ ಪರಸ್ಪರ ಢಿಕ್ಕಿ ➤ ನಾಲ್ವರಿಗೆ ಗಾಯ



(ನ್ಯೂಸ್ ಕಡಬ) newskadaba.com ಪುತ್ತೂರು, ಜೂನ್.18.ಸೋಮವಾರ ಬೆಳಗ್ಗೆ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಓವರ್‌ಟೇಕ್‌ ಮಾಡುವ ಭರದಲ್ಲಿ ಮಾರುತಿ ಜಿಪ್ಸಿ ವಾಹನವು ಬೈಕ್‌ ಹಾಗೂ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ.







ಘಟನೆಯಲ್ಲಿ ಬೈಕ್‌ ಸವಾರ ದೇಲಂಪಾಡಿಯ ಜಿತೇಶ್‌, ಸಹ ಸವಾರೆ ಸವಿತಾ ಮತ್ತು ಜಿಪ್ಸಿ ಚಾಲಕ ರೋಶನ್‌ ಹಾಗೂ ಆತನ ತಾಯಿ ಕೆಪ್ಸಿನ್‌ ಪಿಂಟೋ ಗಾಯಗೊಂಡಿದ್ದಾರೆ.ಪುತ್ತೂರಿಗೆ ತೆರಳುತ್ತಿದ್ದ ಬೈಕನ್ನು ಮಡಿಕೇರಿ ಕಡೆಯಿಂದ ಬಂದ ಜಿಪ್ಸಿ ಓವರ್‌ಟೇಕ್‌ ಮಾಡಲು ಯತ್ನಿಸಿದಾಗ ಜಿಪ್ಸಿಯು ಬೈಕ್‌ ಹಾಗೂ  ಎದುರಿನಿಂದ ಬಂದ ಸುಳ್ಯಕ್ಕೆ ತೆರಳುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿ ಸರಿದರೂ ಪ್ರಯಾಣಿಕರಿಲ್ಲದ ಕಾರಣ ಅಪಾಯ ತಪ್ಪಿದೆ.ಅಪಘಾತದಲ್ಲಿ ಮೂರು ವಾಹನಗಳಿಗೂ ಹಾನಿಯಾಗಿದೆ. ಗಾಯಾಳುಗಳನ್ನು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top