ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸುವರ್ಣಅವಕಾಶ ➤ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11.ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‍ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಉಜಿರೆಯ ರುಡ್‍ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ತರಬೇತಿಗಳು ನಡೆಯಲಿದೆ.

ಈ ತರಬೇತಿಗಳ ವಿವರಗಳು: ಕಂಪ್ಯೂಟರ್ ಡಿ.ಟಿ.ಪಿ 45 ದಿನಗಳು ಜೂನ್ 27ರಿಂದ ಆಗಸ್ಟ್ 10 ರವರೆಗೆ (ಪೇಜ್ ಮೇಕರ್, ಕೋರಲ್ ಡ್ರಾ, ಫೊಟೋ ಶಾಪ್), ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ 13 ದಿನಗಳು ಜುಲೈ 8 ರಿಂದ 21 ರವರೆಗೆ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ 30 ದಿನಗಳು ಜುಲೈ 1 ರಿಂದ 30 ರವರೆಗೆ ಬ್ಯೂಟಿ ಪಾರ್ಲರ್ (ಮಹಿಳೆಯರಿಗೆ) 30 ದಿನಗಳು ಆಗಸ್ಟ್ 1 ರಿಂದ 30 ರವರೆಗೆ, ಕಂಪ್ಯೂಟರೈಸ್‍ಡ್ ಎಕೌಂಟಿಂಗ್ 30 ದಿನಗಳು ಆಗಸ್ಟ್ 5 ರಿಂದ ಸೆಪ್ಟಂಬರ್ 3 ರವರೆಗೆ, ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ 30 ದಿನಗಳು ಆಗಸ್ಟ್ 19 ರಿಂದ ಸೆಪ್ಟಂಬರ್ 17 ರವರೆಗೆ ನಡೆಯಲಿದೆ.


ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್, ಮಹಿಳೆಯರ ಟೈಲರಿಂಗ್, ಕಂಪ್ಯೂಟರ್ ಡಿ.ಟಿ.ಪಿ, ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್, ದ್ವಿಚಕ್ರ ವಾಹನಗಳ ದುರಸ್ಥಿ, ರಬ್ಬರ್ ಟ್ಯಾಪಿಂಗ್, ಮೆನ್ಸ್ ಪಾರ್ಲರ್ ಮತ್ತು ಸೆಲೂನ್ ಉದ್ಯಮಿ, ಜೇನು ಕೃಷಿ, ನರ್ಸರಿ ಕೃಷಿ ಮತ್ತು ಅಣಬೆ ಬೇಸಾಯ, ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ, ಅಟೋ ಚಾಲನೆ (ಮಹಿಳೆಯರಿಗೆ), ಸಿಸಿ ಕ್ಯಾಮರಾ ಆಳವಡಿಸುವಿಕೆ, ಎಲೆಕ್ಟ್ರೋನಿಕ್ಸ್ ಉಪಕರಣಗಳ ರಿಪೇರಿ, ಫಾಸ್ಟ್ ಫುಡ್ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು.

ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಇವರಿಗೆ ಕಳುಹಿಸಬಹುದು. ಅಥವಾ ಸಂಸ್ಥೆಯ online ವೆಬ್‍ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

error: Content is protected !!

Join the Group

Join WhatsApp Group