ಮತ್ತೆ ಮುಂದೂಡಲ್ಪಟ್ಟ ಕಡಬ ತಾಲೂಕು ಉದ್ಘಾಟನಾ ಸಮಾರಂಭ ➤ ಮಾರ್ಚ್ 02 ರಂದು ನೂತನ ಕಡಬ ತಾಲೂಕಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.27. ಕಳೆದ ನಾಲ್ಕು ದಶಕಗಳಿಂದ ಕಡಬ ಪರಿಸರದ ಜನತೆ ಕಾತರದಿಂದ ಕಾಯುತ್ತಿದ್ದ ನೂತನ ಕಡಬ ತಾಲೂಕು ಉದ್ಘಾಟನೆ ಸಮಾರಂಭವು ಮತ್ತೆ ಮುಂದೂಡಿಕೆಯಾಗಿದ್ದು, ಮಾರ್ಚ್ 01 ಶುಕ್ರವಾರದ ಬದಲಾಗಿ ಮಾರ್ಚ್ 02 ಶನಿವಾರದಂದು ನಡೆಯಲಿದೆ.

ಈ ಬಗ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರು, ಮಾರ್ಚ್ 02 ಶನಿವಾರದಂದು ಅಪರಾಹ್ನ 03 ಗಂಟೆಗೆ ತಾಲೂಕು ಉದ್ಘಾಟನೆ ನಡೆಯಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ‌. ಕಳೆದ ಮೂರು ಬಾರಿ ಉದ್ಘಾಟನೆಗೆ ದಿನ ನಿಗದಿಗೊಂಡರೂ, ವಿಭಿನ್ನ ಕಾರಣಗಳಿಂದಾಗಿ ಕೊನೆಯ ಕ್ಷಣದಲ್ಲಿ ಉದ್ಘಾಟನಾ ಭಾಗ್ಯದಿಂದ ವಂಚಿತವಾಗಿತ್ತು‌. ಈ ಸಲವಾದರೂ ಮಾರ್ಚ್ 01 ರಂದು ಉದ್ಘಾಟನೆಗೊಳ್ಳಲಿದೆ ಎನ್ನುವ ಆಶಾಭಾವಬೆಯಲ್ಲಿದ್ದ ಜನತೆಗೆ ಮತ್ತೆ ಆತಂಕ ಎದುರಾಗಿದ್ದು, ದಿನೇ ದಿನೇ ದಿನಾಂಕ ಬದಲಾವಣೆಯಾಗಿ ಕೊನೆಗೆ ಲೋಕಸಭಾ ಮತದಾನದ ದಿನಾಂಕ ಪ್ರಕಟವಾದರೆ ಮತ್ತೆ ಮಾರ್ಚ್ 02 ರಂದು ನೂತನ ಕಡಬ ತಾಲೂಕು ಉದ್ಘಾಟನೆ ಆಗಬಹುದೇ ಎಂಬ ಅನುಮಾನವೂ ಆರಂಭವಾಗಿದೆ.

Also Read  ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ- ಅ.14ಕ್ಕೆ ತೀರ್ಪು

error: Content is protected !!