ಕುಕ್ಕೆ: ಪುಣ್ಯನದಿ ದರ್ಪಣ ತೀರ್ಥದಲ್ಲಿ ಅಸಂಖ್ಯ ಮೀನುಗಳು ಸಾವು ➤ ಕ್ರಿಮಿ ನಾಶಕ ಮಿಶ್ರಣ ಶಂಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಫೆ.11.ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಲೆ ಹರಿಯುವ ಪುಣ್ಯನದಿ ದರ್ಪಣ ತೀರ್ಥದ ಕೆಳಭಾಗದ ನೀರಿನಲ್ಲಿ ನೂರಾರು ಮೀನುಗಳುಮೃತಪಟ್ಟಿವೆ.ದುಷ್ಕರ್ಮಿಗಳು ನದಿ ನೀರಿಗೆ ಕ್ರಿಮಿ ನಾಶಕ ಮಿಶ್ರಣ ಮಾಡಿರುವ ಶಂಕೆ ವ್ಯಕ್ತವಾ ಗಿದ್ದರೆ, ಇನ್ನೊಂದೆಡೆ ನದಿ ನೀರು ಬತ್ತಿ ಕಲುಷಿತಗೊಂಡು ಜಲಚರಗಳು ಸತ್ತಿರುವ ಸಂಶಯವೂ ಇದೆ. ಶನಿವಾರ ಸಂಜೆ ವೇಳೆಗೆ ನೂರಾರು ಮೀನುಗಳು ನದಿಯಲ್ಲಿ ಸತ್ತಿರು ವುದು ಮತ್ತು ಅಸಂಖ್ಯ ಮೀನುಗಳು ಸಾವು ಬದುಕಿನ ನಡುವೆ ನೀರಿನಲ್ಲಿ ವಿಲವಿಲನೆ ಒದ್ದಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

 

ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೆ ಇರುವ ದರ್ಪಣ ತೀರ್ಥ ನದಿ ಕುಮಾ ರಧಾರಾದ ಉಪನದಿ. ಕುಮಾರ ಪರ್ವ ತದಿಂದ ಹರಿದು ಬರುವ ಈ ನದಿಯೂ ಆದಿಸುಬ್ರಹ್ಮಣ್ಯ ಭಾಗದ ಮೂಲಕ ದೇವಸ್ಥಾನದ ಪಕ್ಕದಲ್ಲೆ ಹರಿದು ಕುಮಾರ ಧಾರಾ ಸೇರುತ್ತದೆ. ಕುಮಾರಧಾರಾ ನದಿ ಸೇರುವ ಮುಂಚಿತ ರುದ್ರಪಾದ ಬಳಿ ಈ ನದಿಯನ್ನು ಮಾನಾಡು ಭಾಗದ ಇನ್ನೊಂದು ಕಿರು ಹಳ್ಳವೂ ಕೂಡಿಕೊಳ್ಳುತ್ತದೆ.ಇವೆರಡೂ ಸೇರಿ ಹರಿಯುವ ರುದ್ರಪಾದ ಬಳಿಯಿಂದ ಸ್ವಲ್ಪ ಕೆಳಗಿನ ಜಾಗದಲ್ಲಿ ಅರಣ್ಯ ಇಲಾಖೆ ಹಳೆ ಕಚೇರಿಯ ಹಿಂಭಾಗದ ನದಿ ನೀರಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.

Also Read  ನೆಲ್ಯಾಡಿ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ ➤ ಸುಟ್ಟು ಕರಕಲಾದ ಮೃತದೇಹ

 

error: Content is protected !!
Scroll to Top