ನಾಳೆ(ಡಿ.18) ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕಡಬದಲ್ಲಿ ಸೌಹಾರ್ದ ಹಗ್ಗ ಜಗ್ಗಾಟ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಕಡಬ ಪೊಲೀಸ್ ಠಾಣೆ ಹಾಗೂ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.)ನ ಆಶ್ರಯದಲ್ಲಿ ಕಡಬದ ಕದಂಬ ಆಟೋ, ಸಂಗಮ್ ಜೀಪು ಹಾಗೂ ಮಧುರಾ ವ್ಯಾನ್ ಚಾಲಕ – ಮಾಲಕರ ಸಂಘ ಹಾಗೂ ಮರ್ಧಾಳ ಆಟೋ ಚಾಲಕರ ಸಹಕಾರದೊಂದಿಗೆ ‘ಅಪರಾಧ ತಡೆ ಮಾಸಾಚರಣೆ – 2018’ ರ ಅಂಗವಾಗಿ ಸೌಹಾರ್ದ ಹಗ್ಗ ಜಗ್ಗಾಟ ಸ್ಪರ್ಧೆಯು ಮಂಗಳವಾರದಂದು ಕಡಬದಲ್ಲಿ ನಡೆಯಲಿದೆ.

ಅಪರಾಹ್ನ 2 ಗಂಟೆಗೆ ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವರೆಗೆ ‘ಅಪರಾಧ ತಡೆ ಜಾಗೃತಿ ಜಾಥಾ ನಡೆಯಲಿದ್ದು, ಬಳಿಕ ದೇವಸ್ಥಾನದ ವಠಾರದಲ್ಲಿ ಹಗ್ಗ ಜಗ್ಗಾಟ ನಡೆಯಲಿದೆ. ಪ್ರಥಮ ಬಹುಮಾನವಾಗಿ ರೂ.3333 ಹಾಗೂ ಟ್ರೋಫಿ, ದ್ವಿತೀಯ ರೂ.2222 ಹಾಗೂ ಟ್ರೋಫಿ, ತೃತೀಯ ರೂ. 1111 ಹಾಗೂ ಟ್ರೋಫಿ, ಚತುರ್ಥ ಬಹುಮಾನವಾಗಿ ರೂ. 555 ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9480805364 ಅಥವಾ 9448446145 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಹಿರಿಯರ ಕ್ರೀಡಾಕೂಟ: ಎಂ.ಎಸ್.ವಸಂತಿ ಮೆದು ರಾಷ್ಟ್ರಮಟ್ಟಕ್ಕೆ

error: Content is protected !!
Scroll to Top