ಆರ್.ಟಿ.ಸಿ., ಭೂಮಾಪನ, ಭೂ ಪರಿವರ್ತನೆಯಲ್ಲಿ ವಿಳಂಬವಾಗುತ್ತಿದೆಯೇ..? ► ನ.12 ರಂದು ಜಿಲ್ಲಾ ಮಟ್ಟದ ಕಂದಾಯ ಅದಾಲತ್‍ನಲ್ಲಿ ದೊರೆಯಲಿದೆ ಪರಿಹಾರ ► ಮುಂಚಿತವಾಗಿ ಮನವಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.04. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಮತ್ತು ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ‘ಕಂದಾಯ ಅದಾಲತ್’ನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನವೆಂಬರ್ 12 ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮನವಿ ಸಲ್ಲಿಸಬೇಕಾದ ವಿಷಯಗಳು: ಭೂಪರಿವರ್ತನೆಗೆ ಸಂಬಂಧಿಸಿದಂತೆ ವಿಳಂಬ ಅಥವಾ ಸಮಸ್ಯೆಗಳು ಇದ್ದಲ್ಲಿ, ಇತರೆ ಕಂದಾಯ ವಿಷಯಗಳಾದ ಆರ್.ಟಿ.ಸಿ. ಭೂಮಾಪನ ಮುಂತಾದ ಕಂದಾಯ ವಿಷಯಗಳು

ಮನವಿ ಸಲ್ಲಿಸುವ ವಿಧಾನ: ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಮನವಿ/ಅಹವಾಲುಗಳನ್ನು ಮುಂಚಿತವಾಗಿ ಅಂದರೆ ನವೆಂಬರ್ 8 ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿ ಸಂತೋಷ್ ಜಿ. ಪರೀಕ್ಷಾರ್ಥ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮೊಬೈಲ್ ನಂ: 9483570317 ಅವರಿಗೆ ಸಲ್ಲಿಸಬೇಕು. ಮೊದಲೇ ಅರ್ಜಿಗಳನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಗಳ ಬಗ್ಗೆ ಮುಂಚಿತವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಅರ್ಜಿಯನ್ನು ಖುದ್ದಾಗಿ ಅಥವಾ ವೆಬ್‍ಸೈಟ್ http://stg3.kar.nic.in/pgrcdk ಹಾಗೂ Email: dc.mnglr@gmail.com ಮೂಲಕ ಸಲ್ಲಿಸಲು ಅಪರ ಜಿಲ್ಲಾಧಿಕಾರಿಗಳು, ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಸುರತ್ಕಲ್: ಬೈಕ್ ಗಳಿಗೆ ಕಂಟೈನರ್ ಲಾರಿ ಢಿಕ್ಕಿ ➤ ಮೂವರಿಗೆ ಗಾಯ  

error: Content is protected !!
Scroll to Top