ದಿವಂಗತ ರೆ|ಫಾ| ಅಬ್ರಹಾಂ ಕಲಪ್ಪಾಟ್ ಸ್ಮರಣಾರ್ಥ ಎವರ್ರೋಲಿಂಗ್ ಟ್ರೋಫಿ ► ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಅ.20. ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ಯೂತ್ ಮೂವ್ ಮೆಂಟ್ ನ ಮಾಜಿ ಡ್ಯೆರೆಕ್ಟರ್ ದಿವಂಗತ ರೆವರೆಂಡ್ ಫಾದರ್ ಅಬ್ರಹಾಂ ಕಲಪ್ಪಾಟ್ ಅವರ ಹೆಸರಿನಲ್ಲಿ ಆರಂಭಿಸಿದ ಅಬ್ರಹಾಂ ಕಲಪ್ಪಾಟ್ ಎವರ್ರೋಲಿಂಗ್ ಟ್ರೋಫಿ ಹಗ್ಗ ಜಗ್ಗಾಟದಲ್ಲಿ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಕೋಡಿಂಬಾಳ ಯುವಕರ ಘಟಕ ಪ್ರಥಮ ಸ್ಥಾನ ಪಡೆದಿದೆ.

ಮಹಿಳೆಯರಿಗಾಗಿ ನಡೆಸಿದ ಹಗ್ಗಜಗ್ಗಾಟದಲ್ಲಿ ಇದೇ ಚರ್ಚ್ ನ ಯುವತಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ. ಸಂತ ಮೇರೀಸ್ ಪ್ರೋ- ಕಥೇಟ್ರಲ್ ನೂಜಿಬಾಳ್ತಿಲದಲ್ಲಿ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಎಂ.ಸಿ.ವೈ.ಯಂ ನೇತೃತ್ವದಲ್ಲಿ ಈ ಪಂದ್ಯಾಟವು ನಡೆಯಿತು. ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಡಾ| ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ರವರು ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆವರೆಂಡ್ ಫಾದರ್ ಡಾ| ಎಲ್ದೋ ಪುತ್ತನ್ ಕಂಡತ್ತಿಲ್, ಪುತ್ತೂರು ಧರ್ಮಪ್ರಾಂತ್ಯದ ಎಂಸಿವೈಎಂ ನಿರ್ದೇಶಕರಾದ ರೆವರೆಂಡ್ ಫಾದರ್ ತೋಮಸ್ ನಿರ್ನಾಂಕುನ್ನೇಲ್, ಅಧ್ಯಕ್ಷರಾದ ಶೈನ್ ಶಿಬಾಜೆ ಹಾಗೂ ವಿವಿಧ ಪದಾಧಿಕಾರಿಗಳು, ಕೋಡಿಂಬಾಳ ಎಂಸಿವೈಎಂ ನಿರ್ದೇಶಕರಾದ ರೆವರೆಂಡ್ ಫಾದರ್ ಮಾಥ್ಯೂ ವಾಝಕ್ಕಾಪ್ಪಾರ, ಘಟಕದ ಅಧ್ಯಕ್ಷರಾದ ಜಿಜೋ ಜಾನ್, ಚರ್ಚ್ ಟ್ರಸ್ಟಿ ಜೇಮ್ಸ್ ವಲ್ಲಡಿ, ಅನಿಮೇಟರ್ ಸನೀಶ್ ಬಿ.ಟಿ. ಹಾಗೂ ಪದಾಧಿಕಾರಿಗಳು, ಎಂಸಿವೈಎಂ ಯುವಕ – ಯುವತಿ ಸದಸ್ಯರು, ಚರ್ಚಿನ ಸದಸ್ಯರು ಉಪಸ್ಥಿತರಿದ್ದರು.

Also Read  ಬಂಟ್ವಾಳ: ತಡೆಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿತ ➤ ಯುವಕನ ರಕ್ಷಣೆ

error: Content is protected !!
Scroll to Top