ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ ‘ಮುಳುಗು ಸೇತುವೆ’

(ನ್ಯೂಸ್ ಕಡಬ) newskadaba.com ಕಡಬ, ಜು.15. ಮುಳುಗು ಸೇತುವೆಯೆಂದೇ ಖ್ಯಾತಿ ಪಡೆದಿರುವ ಹೊಸ್ಮಠ ಸೇತುವೆಯ ಮೇಲೆ ಭಾನುವಾರ ಸಂಜೆ ನೀರಿನ ಹರಿವು ಇಳಿದ ಕಾರಣ ವಾರದ ನಂತರ ಸಂಚಾರಕ್ಕೆ ಮುಕ್ತವಾಗಿದೆ.

ಕಳೆದ ಒಂದು ವಾರದಿಂದ ಸೇತುವೆಯ ಮೇಲೆ ನೀರಿನ ಹರಿವು ಒಂದೇ ರೀತಿಯಲ್ಲಿ ಇದ್ದುದರಿಂದ ಸಂಚಾರಕ್ಕೆ ತಡೆಯುಂಟಾಗಿತ್ತು. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಹಳೆಯ ಮುಳುಗು ಸೇತುವೆಯ ಪಕ್ಕದಲ್ಲೇ ಹೊ ಸೇತುವೆಯೊಂದು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಪೂರ್ಣಗೊಂಡ ಕಾರಣದಿಂದ ಹಳೆಯ ಸೇತುವೆಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ತಲೆದೋರಿತ್ತು.

Also Read  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ➤ ಮಂಗಳೂರು ವಿವಿಯ ಸಹ ಪ್ರಾಧ್ಯಾಪಕ ಖುಲಾಸೆ

error: Content is protected !!
Scroll to Top