
(ನ್ಯೂಸ್ ಕಡಬ) newskadaba.com, ನ .28 . ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಕೇರಳದಲ್ಲೇ ಪ್ರಪ್ರಥಮ ಬಾರಿಗೆ ರೋಬೋಟಿಕ್ ಸೆಂಟ್ರಲ್ ಪ್ಯಾಂಕ್ರಿಯಾಟೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಪ್ಯಾಂಕ್ರಿಯಾಸ್ನ ಮಧ್ಯಭಾಗದಲ್ಲಿ ಗಡ್ಡೆ ಹೊಂದಿದ್ದ 22 ವರ್ಷದ ಯುವತಿಗೆ ಡಾ. ರೋಹನ್ ಶೆಟ್ಟಿ ಹಾಗೂ ಡಾ. ಅಶ್ವಿನ್ ಆಳ್ವ ಅವರ ತಂಡ, ಅರಿವಳಿಕೆ ತಜ್ಞ ಡಾ. ಹರೀಶ್ ಕಾರಂತ ಅವರ ಸಹಕಾರದೊಂದಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆ.
ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆರೋಗ್ಯಕರ ಪ್ಯಾಂಕ್ರಿಯಾಸ್ನ ಬಹುಪಾಲು ಭಾಗವನ್ನು ಉಳಿಸುವ ಮೂಲಕ ಭವಿಷ್ಯದ ಮಧುಮೇಹ ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ.ಶಸ್ತ್ರಚಿಕಿತ್ಸೆಯ ಬಳಿಕ ಯುವತಿ ಶೀಘ್ರ ಚೇತರಿಸಿಕೊಂಡು ಒಂದು ವಾರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಸಾಧನೆ ಎ.ಜೆ. ಆಸ್ಪತ್ರೆಯ ವೈದ್ಯಕೀಯ ಕ್ಷೇತ್ರದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.




