ಶಾಲಾ ಟ್ಯಾಕ್ಸಿಗೆ ಲಾರಿ ಡಿಕ್ಕಿ; ಆರು ಮಂದಿ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com, ಅ .28 . ಹಳೆಯಂಗಡಿಯ ಪಾವಂಜೆ ಜಂಕ್ಷನ್ ಬಳಿ ಗುರುವಾರ ರಾತ್ರಿ ಕಂಟೇನರ್ ಲಾರಿ ಶಾಲಾ ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿಶೇಷ ಚೇತನ ಮಕ್ಕಳು, ಒಬ್ಬ ಶಿಕ್ಷಕಿ ಮತ್ತು ಚಾಲಕ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಪರಿಣಾಮ ಟ್ಯಾಕ್ಸಿಯ ಹಿಂಭಾಗವು ತೀವ್ರವಾಗಿ ನಜ್ಜುಗುಜ್ಜಾಗಿದ್ದು, ಆರು ಮಂದಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಹಳೆಯಂಗಡಿಯಿಂದ ಸುರತ್ಕಲ್ ಕಡೆಗೆ ವಿಶೇಷ ಚೇತನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಜೀಪ್, ಪಾವಂಜೆ ಜಂಕ್ಷನ್ನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಳವಡಿಸಲಾದ ಬ್ಯಾರಿಕೇಡ್ಗಳ ಬಳಿ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ಟ್ಯಾಕ್ಸಿ ಚಾಲಕ ಜಂಕ್ಷನ್ ಬಳಿ ಎಡಭಾಗದಿಂದ ಕಂಟೇನರ್ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಸುತ್ತಿದ್ದ ವೇಳೆ ಕಂಟೇನರ್ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಕ್ಸಿಯ ಹಿಂಭಾಗಕ್ಕೆ ವ್ಯಾಪಕ ಹಾನಿಯಾಗಿದ್ದು, ನಾಲ್ಕು ಮಕ್ಕಳು ಮತ್ತು ಒಬ್ಬ ಶಿಕ್ಷಕರನ್ನು ಶಾಲೆಗೆ ಕರೆದೊಯ್ಯಲಾಗುತ್ತಿತ್ತು. ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆ ಉಂಟಾಗಿ, ವಾಹನ ಸವಾರರು ಪರಾಡುವಂತಾಯಿತು. ಸ್ಥಳೀಯ ಆಟೋರಿಕ್ಷಾ ಚಾಲಕರು ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಟ್ಯಾಕ್ಸಿ ಮತ್ತು ಕಂಟೇನರ್ ಟ್ರಕ್ ಅನ್ನು ನಂತರ ರಸ್ತೆಯಿಂದ ತೆರವುಗೊಳಿಸಲಾಯಿತು. ಇದರಿಂದಾಗಿ ಮತ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.




