ಗೂಗಲ್ ಲೆನ್ಸ್ ಬಳಸಿ ನಕಲು ಮಾಡಿ VAO ಪರೀಕ್ಷೆಯಲ್ಲಿ ಅಂಕಗಳಿಕೆ; ಆರೋಪಿ ವಿರುದ್ಧ ಎಫ್‌ಐಆರ್ ದಾಖಲು

(ನ್ಯೂಸ್‌ ಕಡಬ) newskadaba.com, ನ. 02. ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಆರೋಪಿ, VAO ಪರೀಕ್ಷೆಯಲ್ಲಿ 151 ಅಂಕ ಗಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಗೂಗಲ್ ಲೆನ್ಸ್ ಬಳಸಿ ನಕಲು ಮಾಡಿದ ಆರೋಪದಡಿ ಶಂಕರ್ ಬನ್ನೂರು ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಪರೀಕ್ಷಾ ಅಕ್ರಮದ ತನಿಖೆ ವೇಳೆ ಶಿಗ್ಗಾಂವಿಯ ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 12ರಲ್ಲಿ ಪರೀಕ್ಷೆಯ ಮೊದಲ ಮತ್ತು ಎರಡನೇ ಪತ್ರಿಕೆಯಲ್ಲಿ ನಿಯಮ ಉಲ್ಲಂಘಿಸಿ ನಕಲು ಮಾಡಿರುವುದು ಪತ್ತೆಯಾಗಿದೆ. 200 ಅಂಕಗಳ ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಕ್ರಮವಾಗಿ ಉತ್ತರಗಳನ್ನು ಗುರುತಿಸಿ 151 ಅಂಕಗಳನ್ನು ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಸವಣೂರು ಎಸಿ ಸಮೀರ ಪ್ರಕಾಶ ಖೋಡೆ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Scroll to Top