ಗುಡ್ ಶೆಪರ್ಡ್ ಪ್ರೌಢಶಾಲೆ ಮರ್ದಾಳ ದ ವೈಷ್ಣವಿ ಕೆ ಹೆಚ್ ರಾಜ್ಯ ಮಟ್ಟಕ್ಕೆ

(ನ್ಯೂಸ್‌ ಕಡಬ) newskadaba.com, ಅ .31. ಕಡಬ: ಗುಡ್ ಶೆಫರ್ಡ್ ಪ್ರೌಢಶಾಲೆ ಮರ್ದಾಳ ಇಲ್ಲಿನ 8ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಕೆಎಚ್ ಇವರು ದಿನಾಂಕ 27 10 2026 ಮತ್ತು 28 10 2026 ರಂದು ಮಂಗಳೂರಿನ ಮಂಗಳಾ! ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ under 14 girls ವಿಭಾಗದಲ್ಲಿ ಭಾಗವಹಿಸಿ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಜಿಲ್ಲಾಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸುವುದರ ಮೂಲಕ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಚಕ್ರ ಎಸೆತದಲ್ಲಿ 2017 ರ ದಾಖಲೆಯನ್ನು (30.55m) ಮುರಿದು 2026ರ ಹೊಸ ದಾಖಲೆಯನ್ನು (31.24m)ನಿರ್ಮಿಸಿದ್ದಾರೆ. ಗುಂಡು ಎಸೆತದಲ್ಲಿ 2018ರ(9.96m) ದಾಖಲೆಯನ್ನು ಮುರಿದು 2026ರ(11.29m) ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ರವೀಂದ್ರ ವೇಲೂರವರು ಮಾರ್ಗದರ್ಶನ ನೀಡಿರುತ್ತಾರೆ.. ಇವರು ಮರ್ದಾಳ ಹೊಸಕ್ಲು ನಿವಾಸಿಗಳಾದ ಶ್ರೀ ಕುಶಾಲಪ್ಪ ಗೌಡ ಹಾಗೂ ಶ್ರೀಮತಿ ಶಶಿಕಲಾ ದಂಪತಿಯವರ ಪ್ರಥಮ ಪುತ್ರಿ ಯಾಗಿದ್ದಾರೆ. ಈ ಬಾಲ ಪ್ರತಿಭೆಯ ಮುಂದಿನ ಕ್ರೀಡಾ ಜೀವನ ಸುಖಕರವಾಗಿರಲಿ.

Scroll to Top