ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!

(ನ್ಯೂಸ್‌ ಕಡಬ) newskadaba.com, ಅ. 27 .ಜಾಗತಿಕ ಅಸ್ಥಿರತೆ ಮತ್ತು ಕಚ್ಚಾತೈಲ ಬೆಲೆ ಏರಿಕೆಯ ಪ್ರಭಾವದಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಜಿಗಿತ ಕಂಡುಬಂದಿದೆ. ಅಕ್ಟೋಬರ್ 27ರಂದು 10 ಗ್ರಾಂ ಅಪರಂಜಿ (24 ಕ್ಯಾರೆಟ್) ಚಿನ್ನದ ಬೆಲೆಯಲ್ಲಿ ಬರೋಬ್ಬರಿ 540 ರೂ. ಏರಿಕೆಯಾಗಿದ್ದು , ಒಟ್ಟು ದರ **1,43,290 ರೂ ತಲುಪಿದೆ. 1 ಗ್ರಾಂ ಚಿನ್ನ ಬೆಲೆ 14,329 ರೂ..

  ಹಾಗೆಯೇ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,31,350 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,07,570 ರೂ. ಆಗಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ 1 ಕೆಜಿಗೆ 2.20 ಲಕ್ಷ ರೂ. ಮುಂದುವರೆದಿದೆ.

Scroll to Top