ಹೌತಿಗಳ ಎಚ್ಚರಿಕೆ ನಡುವೆಯೂ ರಿಯಾದ್ ವಿಮಾನ ನಿಲ್ದಾಣ ಪುನರಾರಂಭ; ಪ್ರಯಾಣಿಕರಿಗೆ ಮಹತ್ವದ ಸೂಚನೆ

(ನ್ಯೂಸ್ ಕಡಬ) newskadaba.com, ಅ 26 .ಹೌತಿ ಬೆದರಿಕೆ ಕಾರಣ ಎರಡು ವಾರಗಳ ಕಾಲ ಸ್ಥಗಿತಗೊಂಡಿದ್ದ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಗಳು ಮತ್ತೆ ಆರಂಭ.ವಿಮಾನ ನಿಲ್ದಾಣವನ್ನು ‘ಅಸುರಕ್ಷಿತ’ ಮಿಲಿಟರಿ ಗುರಿ ಎಂದು ಘೋಷಿಸಿರುವ ಹೌತಿ ಬಂಡುಕೋರರು, ಪ್ರಯಾಣಿಕರು ಮತ್ತು ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಸೂಚನೆ.
ಭಾನುವಾರ ಮುಂಜಾನೆ ರಿಯಾದ್ ಪ್ರದೇಶದತ್ತ ಬಂದ ಎರಡು ಡ್ರೋನ್‌ಗಳನ್ನು ಸೌದಿ ಮಿಲಿಟರಿ ಒಕ್ಕೂಟ ಹೊಡೆದುರುಳಿಸಿದೆ.ಯೆಮನ್‌ನ ಹೌತಿ ಬಂಡುಕೋರರ ದಾಳಿಯ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಸ್ಥಗಿತಗೊಂಡಿದ್ದ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರದಿಂದ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ. ಹೊಸ ವ್ಯವಸ್ಥೆಯಂತೆ ಟರ್ಮಿನಲ್ 1 ಅನ್ನು ದೇಶೀಯ ಮತ್ತು ಟರ್ಮಿನಲ್ 2 ಅನ್ನು ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಮೀಸಲಿಡಲಾಗಿದೆ.
ವಿಮಾನ ನಿಲ್ದಾಣ ಪುನರಾರಂಭಗೊಂಡ ಬೆನ್ನಲ್ಲೇ ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಇದು ‘ಅಸುರಕ್ಷಿತ’ ಮಿಲಿಟರಿ ಗುರಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ, ರಿಯಾದ್ ಕಡೆಗೆ ಬಂದ ಎರಡು ಡ್ರೋನ್‌ಗಳನ್ನು ಸೌದಿ ನೇತೃತ್ವದ ಒಕ್ಕೂಟ ಯಶಸ್ವಿಯಾಗಿ ಹೊಡೆದುರುಳಿಸಿದೆ.

Scroll to Top