“ಹೊಸ ರೂಲ್ಸ್ ಜಾರಿ – ಜನವರಿ 1 ರಿಂದ ಬದಲಾವಣೆ!”

(ನ್ಯೂಸ್ ಕಡಬ) newskadaba.com, ಅ . 23 .ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಮೆಸೇಜಿಂಗ್ ಆ್ಯಪ್ಗಳ ಬಳಕೆಗೆ ಹೊಸ ನಿಯಮಗಳನ್ನು ತರಲು ಚಿಂತನೆ ನಡೆಸಿದೆ.
ಮೆಸೇಜಿಂಗ್ ಖಾತೆಗೆ ಬಳಸುವ ಮೊಬೈಲ್ ಸಂಖ್ಯೆ ಮತ್ತು ಆ ಫೋನ್ನಲ್ಲಿರುವ ಸಕ್ರಿಯ ಸಿಮ್ ಕಾರ್ಡ್ ನಡುವಿನ ಸಂಪರ್ಕವನ್ನು ನಿರಂತರವಾಗಿ ಖಚಿತಪಡಿಸುವುದು ಕಡ್ಡಾಯವಾಗಲಿದೆ. ಇದರಿಂದ ಸಿಮ್ ಇಲ್ಲದೆ ಕೇವಲ ವೈ-ಫೈ ಮೂಲಕ ಆ್ಯಪ್ ಬಳಸುವುದಕ್ಕೆ ನಿರ್ಬಂಧ ಬೀಳುವ ಸಾಧ್ಯತೆಯಿದೆ.ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ಚಾಟ್ ಸೇರಿದಂತೆ ಪ್ರಮುಖ ಮೊಬೈಲ್ ಸಂಖ್ಯೆ ಆಧಾರಿತ ಮೆಸೇಜಿಂಗ್ ಆ್ಯಪ್ಗಳು ಇದರ ವ್ಯಾಪ್ತಿಗೆ ಬರುವ ನಿರೀಕ್ಷೆಯಿದೆ.
ಕಂಪನಿಗಳು ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಡಿಸೆಂಬರ್ 31, 2026ರವರೆಗೆ ಗಡುವು ನೀಡಲಾಗಿದ್ದು, ಜನವರಿ 1, 2027ರಿಂದ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ




