
(ನ್ಯೂಸ್ ಕಡಬ) newskadaba.com, ಅ . 20 . ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ಮತ್ತು ಆಂಬುಲೆನ್ಸ್ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.ಮೊದಲ ಹಂತದಲ್ಲಿ ‘ರೋಡ್ ಸೇಫ್ಟಿ’ ಯೋಜನೆಯಡಿ 100 ಹೊಸ ಆಂಬುಲೆನ್ಸ್ಗಳನ್ನು ಖರೀದಿಸಲು ಸಿದ್ಧತೆ ನಡೆಸಲಾಗಿದೆ.
ಮೊದಲ ಹಂತದ ಬಳಿಕ ಹಂತಹಂತವಾಗಿ ಇನ್ನೂ 450 ಹೊಸ ಆಂಬುಲೆನ್ಸ್ಗಳನ್ನು ಖರೀದಿಸಲು ಸರ್ಕಾರ ಚಿಂತನೆ ನಡೆಸಿದೆ.ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ಈ ಹೊಸ ವಾಹನಗಳು ಬಹಳಷ್ಟು ನೆರವಾಗಲಿವೆ.




