ಉಡುಪಿಯಲ್ಲಿ ಮುಂದುವರಿದ ಡ್ರಗ್ಸ್ ಬೇಟೆ: 85,000 ರೂ. ಮೌಲ್ಯದ ಮಾದಕ ವಸ್ತುಗಳೊಂದಿಗೆ ವ್ಯಕ್ತಿ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಅ.19.  ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಸ್ಕೂಟರ್‌ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಉದ್ಯಾವರದ ಅಂಕುದ್ರು ನಿವಾಸಿ ವಿಜಯ್ ಪೂಜಾರಿ (36) ಎಂಬಾತನನ್ನು ಅಕ್ಟೋಬರ್ 17ರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.35,000 ರೂ. ಮೌಲ್ಯದ 17.66 ಗ್ರಾಂ ಎಂಡಿಎಂಎ, ತೂಕದ ಯಂತ್ರ, 2.18 ಗ್ರಾಂ ಬಿಳಿ ಬಣ್ಣದ ಮಾತ್ರೆಗಳು-ಪುಡಿ, ಸ್ಕೂಟರ್ ಹಾಗೂ ಮೊಬೈಲ್ ಫೋನ್‌ಗಳು (ಒಟ್ಟು ಮೌಲ್ಯ ಅಂದಾಜು ₹85,000).

ಆರೋಪಿ ವಿರುದ್ಧ ಈಗಾಗಲೇ ಉಡುಪಿ ನಗರ ಠಾಣೆಯಲ್ಲಿ ಮೂರು ಹಾಗೂ ಕಾಪು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಈತ ಇತ್ತೀಚೆಗೆ ಸೆಪ್ಟೆಂಬರ್ 24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಗೊಂಡಿದ್ದನು.ಉಡುಪಿ ಡಿವೈಎಸ್‌ಪಿ ಬೆಳ್ಳಿಯಪ್ಪ ಹಾಗೂ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ, ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top