ಜೀವಂತ ಫಲಾನುಭವಿಗಳಿಗೆ ಮೃತರೆಂದು ತಪ್ಪಾಗಿ ತೋರಿಸುವ ಸಮಸ್ಯೆ

ತ್ವರಿತ ಪರಿಹಾರಕ್ಕೆ ಭರತ್ ಮುಂಡೋಡಿ ಸೂಚನೆ

(ನ್ಯೂಸ್‌ ಕಡಬ) newskadaba.com, ಅ. 16.ಜೀವಂತ ಫಲಾನುಭವಿಗಳನ್ನು ಮೃತರೆಂದು ತೋರಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಮೃತಪಟ್ಟವರ ಖಾತೆಗೆ ಜಮೆಯಾದ ಹಣ ವಸೂಲಿಗೆ 100% ಗುರಿ ಸಾಧಿಸಲು ಸೂಚನೆ.ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ವಿಶೇಷಚೇತನರಿಗೆ ಮೀಸಲಿಟ್ಟ ಆಸನಗಳು ಅವರಿಗೆ ಸಿಗುವಂತೆ ಕಟ್ಟುನಿಟ್ಟಿನ ಕ್ರಮ.

ಇ-ಕೆವೈಸಿ ಪ್ರಕ್ರಿಯೆಯನ್ನು ನಿಗದಿತ ಗುರಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲು ಮನವಿ.ಗ್ರಾಮೀಣ/ಅರಣ್ಯ ಪ್ರದೇಶಗಳ ವಿದ್ಯುತ್ ವ್ಯತ್ಯಯ ನೀಗಿಸಲು ಹೆಚ್ಚುವರಿ ಸಹಾಯಕ ಪವರ್‌ಮ್ಯಾನ್‌ಗಳ ನೇಮಕಕ್ಕೆ ಇಂಧನ ಸಚಿವರಿಗೆ ಪತ್ರ ಬರೆಯಲು ನಿರ್ಣಯ.

ಸ್ಥಳೀಯ ನಿರುದ್ಯೋಗಿ ಯುವಕ-ಯುವತಿಯರಿಗೆ ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ದೇಶನ.

Scroll to Top