
(ನ್ಯೂಸ್ ಕಡಬ) newskadaba.com, ಅ. 10 . ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮರುಪರಿಶೀಲನಾ ಅರ್ಜಿ ಮೂಲಕ ಹೊಸ ನಿಯಮಗಳು ಜಾರಿಗೆ ಬಂದಿದ್ದು, ‘ಪಬ್ಲಿಕ್ ಟಿವಿ’ಗೆ ಇದರ ಅಂತಿಮ ಪ್ರತಿ ಲಭ್ಯವಾಗಿದೆ. ಈ ಮರುಪರಿಶೀಲನಾ ಅರ್ತಿಯು SIR ಮಾದರಿಯಲ್ಲಿದ್ದು, ಆ್ಯಪ್‌ನಲ್ಲಿ ಸರ್ವೆ ಆದರೂ ಕಡ್ಡಾಯವಾಗಿ ಆಫ್‌ಲೈನ್ ಮರುಪರಿಶೀಲನಾ ಅರ್ತಿಯನ್ನು ಭರ್ತಿ ಮಾಡಬೇಕಿದೆ.
ಫಲಾನುಭವಿಯು ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಶಾಖೆಯಲ್ಲಿ ಖಾತೆ ಹೊಂದಿರಬೇಕು. ಬ್ಯಾಂಕ್‌ನಲ್ಲಿ ಯಾವುದೇ ಸಾಲ ಪಡೆಯದ ಖಾತೆಯ ನಂಬರ್ ನೀಡಬೇಕು ಮತ್ತು ಜಂಟಿ ಖಾತೆ ನೀಡುವಂತಿಲ್ಲ.ಪಡಿತರ ಚೀಟಿ ಸಂಖ್ಯೆ ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿರದವರು ಕೂಡಲೇ ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ.
ಚುನಾವಣೆ ಮಾದರಿ ನೀತಿ ಸಂಹಿತೆ ಮುಗಿದ ಹಾಗೂ ಮುಖ್ಯಮಂತ್ರಿಗಳಿಂದ ಅಧಿಕೃತ ಸೂಚನೆ ದೊರೆತ ಬಳಿಕ ಈ ಮರುಪರಿಶೀಲನಾ ಸಮೀಕ್ಷೆ ಆರಂಭವಾಗುವ ಸಾಧ್ಯತೆಯಿದೆ.




