
(ನ್ಯೂಸ್ ಕಡಬ) newskadaba.com, ಅ. 10 . ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಅಕ್ಟೋಬರ್ 12 ರಿಂದ 17 ರವರೆಗೆ ಸಾಂಸ್ಕೃತಿಕ ಉತ್ಸವ ಮತ್ತು ದಸರಾ ಸಂಭ್ರಮ ಕಳೆಗಟ್ಟಲಿದೆ.
ಟರ್ಮಿನಲ್ 2 (T2) ರ ಆಗಮನದ ಮುಂಭಾಗದ ಆವರಣದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅನುಪಮಾ ಹೊಸಕೆರೆ ಅವರಿಂದ ‘ದಸರಾ ಗೊಂಬೆ’ ಪ್ರದರ್ಶನ ನಡೆಯಲಿದೆ.ಅಕ್ಟೋಬರ್ 16 ರಂದು ಒಂಬತ್ತನೇ ತಲೆಮಾರಿನ ಕಲಾವಿದ ಗುಂಡುರಾಜು ಮತ್ತು ತಂಡದಿಂದ ವಿಶೇಷ ‘ತೊಗಲು ಗೊಂಬೆಯಾಟ’ ಪ್ರದರ್ಶನಗೊಳ್ಳಲಿದೆ.
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸವಾರಿ (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪ್ರತಿ ಗಂಟೆಗೊಮ್ಮೆ ಮತ್ತು ಸಂಜೆ 6:30 ರಿಂದ ರಾತ್ರಿ 9ರವರೆಗೆ ವಿಶೇಷ ದೀಪಾಲಂಕಾರ ಸವಾರಿ) ಹಾಗೂ 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.




