ಖ್ಯಾತ ನಟ ನಾನಾ ಪಾಟೇಕರ್ ಗೋವಾದಲ್ಲಿ ವಿಧಿವಶ: ಸಾವಿನ ಸುತ್ತ ಅನುಮಾನ, ತನಿಖೆ ಆರಂಭ

(ನ್ಯೂಸ್‌ ಕಡಬ) newskadaba.com, ಅ. 10 . ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ ಅವರು ನಿಧನರಾದ ಬಳಿಕ ಗೋವಾ ಪೊಲೀಸರುಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಗುರುವಾರ (ಅ.8) ನಟ ನಾನಾ ಪಾಟೇಕರ್ (76) ಅವರು ಗೋವಾದ ದೋನಾ ಪೌಲಾದ ಓಷನ್ ಪಾರ್ಕ್ನಲ್ಲಿರುವ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೀಗಾಗಿ ಇದೀಗ ಗೋವಾ ಪೊಲೀಸರು ಬಿಎನ್‌ಎಸ್ 194ರ ಅಡಿಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್‌ಐ ನಿತಿನ್ ನಾಯಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ವೈದ್ಯರ ಮಾಹಿತಿ ಪ್ರಕಾರ, ನಾನಾ ಪಾಟೇಕರ್ ಅವರಿಗೆ ಮೊದಲಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರ ಸಾವಿಗೆ ಹೃದಯಾಘಾತವೇ ಕಾರಣವೇ ಎಂದು ಶಂಕಿಸಲಾಗಿದೆ. ಆದರೂ ಕೂಡ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

Scroll to Top