ಉಡುಪಿ: ರೈತರಿಗೆ ಬರೆ ಎಳೆದ ಕೀಟಬಾಧೆ; ತೆಂಗಿನ ಮರಗಳಿಗೆ ಕಪ್ಪು ತಲೆ ಹುಳು, ಕೆಂಪು ಮೂತಿ ಹುಳುಗಳ ದಾಳಿ!

(ನ್ಯೂಸ್‌ ಕಡಬ) newskadaba.com, ಅ. 07.ಕಡಿಮೆ ಮಳೆಯಿಂದ ಈಗಾಗಲೇ ಕಂಗಾಲಾಗಿರುವ ಉಡುಪಿ ಜಿಲ್ಲೆಯ ರೈತರಿಗೆ ಇದೀಗ ಕಪ್ಪು ತಲೆ ಹುಳು ಮತ್ತು ಕೆಂಪು ಮೂತಿ ಹುಳುಗಳ ತೀವ್ರ ಬಾಧೆ ಗಾಯದ ಮೇಲೆ ಎಳೆ ಎಳೆದಂತಾಗಿದೆ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ತೆಂಗಿನ ಮರಗಳು ಈ ಕೀಟಗಳ ಉಪಟಳಕ್ಕೆ ತೀವ್ರವಾಗಿ ಹಾನಿಗೊಳಗಾಗಿವೆ. ಕೀಟಗಳು ತೆಂಗಿನ ಮರದ ಸುಳಿ ಹಾಗೂ ಎಳೆ ಗರಿಗಳನ್ನು തിಂದು ನಾಶಪಡಿಸುತ್ತಿದ್ದು, ಸಂಪೂರ್ಣ ಮರಗಳೇ ಒಣಗಿಹೋಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಬೈಂದೂರಿನ ಹಡವು ಗ್ರಾಮದ ಅತ್ತಿಕೋಣೆ, ಪಡುಕೋಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆ ಗಣನೀಯವಾಗಿ ಹೆಚ್ಚಾಗಿದೆ. ಏಪ್ರಿಲ್‌ನಿಂದ ಆರಂಭವಾದ ಬಿಸಿಲು ಹಾಗೂ ಒಣ ಹವೆ ಮುಂದುವರಿದಿರುವುದೇ ಕೀಟಗಳ ಹಾವಳಿ ಉಲ್ಬಣಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಈಗಾಗಲೇ ತಜ್ಞರ ತಂಡವು ಕೀಟಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದೆ.

Scroll to Top