ಕಡಬ: ನೂಜಿಬಾಳ್ತಿಲದಲ್ಲಿ ಕಾಡಾನೆ ದಾಳಿ – 60ಕ್ಕೂ ಹೆಚ್ಚು ಅಡಿಕೆ ಮರಗಳು ಧ್ವಂಸ!

(ನ್ಯೂಸ್‌ ಕಡಬ) newskadaba.com, ಸೆ. 29. ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿ ಮಾಡಿದ ಘಟನೆ ವರದಿಯಾಗಿದೆ.

ಎಳುವಾಳೆ ಭಾಸ್ಕರ ಗೌಡ ಅವರ ಕೃಷಿ ತೋಟಕ್ಕೆ ಇಟ್ಟಿರುವ ಕಾಡಾನೆ ಹಿಂಡು ಸುಮಾರು 60 ಅಧಿಕ ಅಡಿಕೆ ಕೃಷಿಯನ್ನು ಹಾನಿಗೊಳಿಸಿದೆ‌.  ಘಟನೆಯಲ್ಲಿ ಅಪಾರ ನಷ್ಟ ಸಂಭವಿಸಿದೆ.

ಇದೇ ಪರಿಸರದ ಹೇರ, ಆಲಾಟ ಪರಿಸರದಲ್ಲಿ ಕಾಡಾನೆ ಹಿಂಡು ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ‌. ಕಾಡಾನೆಗಳ ನಿಯಂತ್ರಣಕ್ಕೆ ಆಗ್ರಹಿಸಿದ್ದಾರೆ…

Scroll to Top