
(ನ್ಯೂಸ್ ಕಡಬ) newskadaba.com, ಸೆ. 29 . ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ. ಇ-ಕೆವೈಸಿ ಬಾಕಿ ಇರುವವರು ಗ್ಯಾಸ್ ಏಜೆನ್ಸಿ ಅಥವಾ ಡೆಲಿವರಿ ಸಿಬ್ಬಂದಿ ಮೂಲಕ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ತಡೆಹಿಡಿಯಲಾಗುವುದು.ಆರ್‌ಬಿಐ ನಿಯಮಾವಳಿ ಪ್ರಕಾರ, ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬಲ್ಕ್ ಠೇವಣಿಗಳಿಗೆ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲೂ ಏಕರೂಪದ ಬಡ್ಡಿದರ ಇರಬೇಕು. ಬ್ಯಾಂಕ್‌ಗಳು ಪ್ರತಿದಿನ ಬೆಳಿಗ್ಗೆ 10:00 ಗಂಟೆಗೆ ಹೊಸ ದರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
ಅನಿವಾಸಿ ಭಾರತೀಯರಿಂದ ಸ್ಥಿರಾಸ್ತಿ ಖರೀದಿಸುವಾಗ ಖರೀದಿದಾರರಿಗೆ ಟ್ಯಾನ್ ಅಗತ್ಯವಿರುವುದಿಲ್ಲ. ಸಾಮಾನ್ಯ ಪ್ಯಾನ್ ಬಳಸಿಯೇ ಟಿಡಿಎಸ್ ಕಡಿತಗೊಳಿಸಿ ಫಾರ್ಮ್ 26QC/141 ಮೂಲಕ ವರದಿ ಸಲ್ಲಿಸಬಹುದು.ನಿಗದಿತ ಅವಧಿಯ ನಂತರ ಮಾಡಿಸುವ ಜನನ ಮತ್ತು ಮರಣ ನೋಂದಣಿಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಹೊಸ ಮಾರ್ಗಸೂಚಿಗಳು ಅನ್ವಯವಾಗಲಿವೆ.ಟೆಲಿಕಾಂ ಕಂಪನಿಗಳು ಇನ್ಮುಂದೆ ಕಡ್ಡಾಯವಾಗಿ ಪೂರ್ಣ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳನ್ನು ನೀಡಬೇಕು. ಜೊತೆಗೆ, ಡೇಟಾ ಇಲ್ಲದ ಕೇವಲ ಕಾಲಿಂಗ್ ಹಾಗೂ ಎಸ್‌ಎಂಎಸ್ ಅಗತ್ಯವಿರುವ ಹಿರಿಯ ನಾಗರಿಕರಿಗೆ ಅಗ್ಗದ ದರದ ಪ್ಲಾನ್‌ಗಳು ಲಭ್ಯವಾಗಲಿವೆ.
ಜಾಗತಿಕ ಮಾರುಕಟ್ಟೆಯ ಕಚ್ಚಾತೈಲ ದರಗಳಿಗೆ ಅನುಗುಣವಾಗಿ ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ಬೆಲೆಯನ್ನು ಅಕ್ಟೋಬರ್ 1 ರಂದು ತೈಲ ಸಂಸ್ಥೆಗಳು ಪ್ರಕಟಿಸಲಿವೆ.ರಾಜ್ಯದ ನ್ಯಾಯಬೆಲೆ ಅಂಗಡಿಗಳ ಸಮಯವನ್ನು ಪರಿಷ್ಕರಿಸಲಾಗಿದ್ದು, ಇನ್ಮುಂದೆ ಬೆಳಿಗ್ಗೆ 7:00 ರಿಂದ 12:00 ಹಾಗೂ ಸಂಜೆ 4:00 ರಿಂದ 8:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ.




