ನೀಟ್‌ -ಪಿಜಿ 2026 ಫಲಿತಾಂಶ ಪ್ರಕಟ – 641 ಅಂಕ ಗಳಿಸಿದ ಅಭ್ಯರ್ಥಿ ದೇಶಕ್ಕೆ ಪ್ರಥಮ

(ನ್ಯೂಸ್‌ ಕಡಬ) newskadaba.com, ಸೆ. 25 . ನೀಟ್‌-ಪಿಜಿ 2026 ರ ಫಲಿತಾಂಶವನ್ನ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ ಪ್ರಕಟಿಸಿದೆ. 720ಕ್ಕೆ 641 ಅಂಕ ಗಳಿಸಿದ ಅಭ್ಯರ್ಥಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಇನ್ನೂ ಟಾಪ್-20 ಅಭ್ಯರ್ಥಿಗಳು 614 ರಿಂದ 641 ಅಂಕ ಗಳಿಸಿದ್ದಾರೆ. 2ನೇ ರ‍್ಯಾಂಕ್‌ಗೆ 633 ಅಂಕ ಹಾಗೂ 3ನೇ ರ‍್ಯಾಂಕ್‌ಗೆ 626 ಅಂಕ ಗಳಿಸಿದವರಾಗಿದ್ದಾರೆ.

ಕಳೆದ ಆಗಸ್ಟ್ 30ರಂದು NEET-PG ಪರೀಕ್ಷೆ ನಡೆದಿತ್ತು. ಒಟ್ಟು ದೇಶದ 339 ನಗರದ 1,111 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 2,73,096 ಅಭ್ಯರ್ಥಿಗಳ ಪೈಕಿ 2,65,980 ಪರೀಕ್ಷೆ ಬರೆದಿದ್ದರು.

ಜೈಪುರದ 2,416 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಮರುಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶದಲ್ಲಿ ಅಭ್ಯರ್ಥಿಗಳ ಅಂಕ ಹಾಗೂ ಅಖಿಲ ಭಾರತ ರ‍್ಯಾಂಕ್ ಪ್ರಕಟಿಸಲಾಗಿದೆ. ನೀಟ್‌ ಪಿಜಿ ಮೂಲಕ MD, MS, DNB, DrNB ಸೇರಿದಂತೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ನಡೆಯಲಿದೆ.

Scroll to Top