
(ನ್ಯೂಸ್ ಕಡಬ) newskadaba.com, ಸೆ. 25 .ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕಳೆದ 14 ವರ್ಷಗಳಿಂದ ಉದ್ಯೋಗದಲ್ಲಿದ್ದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಜುಲೈ 20 ರಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು.
ಶಾರ್ಜಾ ಪೊಲೀಸರ ತನಿಖೆಯ ವೇಳೆ, ಓಮನ್ ಮಾರ್ಗದಲ್ಲಿದ್ದ ಕಾರೊಂದರಲ್ಲಿ 2 ಚೀಲಗಳಲ್ಲಿ 9 ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ. ಅವರ ಪತ್ನಿ ಹಾಗೂ ಮಗ ಕೂಡ ನಾಪತ್ತೆಯಾಗಿದ್ದಾರೆ.
ನ್ಯಾಯಕ್ಕಾಗಿ ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಉಡುಪಿ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.ಶಂಕಿತ ಆರೋಪಿಗಳ ವಿರುದ್ಧ ರೆಡ್ ಕಾರ್ನರ್ లేదా ಇಂಟರ್ಪೋಲ್ ನೋಟೀಸ್ ಜಾರಿಯಾಗದೆ ನೇರ ಕಾನೂನು ಕ್ರಮ ಸಾಧ್ಯವಿಲ್ಲವಾದರೂ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಂಟರ್ಪೋಲ್ ಮೂಲಕ ಮಾಹಿತಿ ಪಡೆದು ಕುಟುಂಬಕ್ಕೆ ನೆರವಾಗುವುದಾಗಿ ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.




