ಕಾಸರಗೋಡು: ಆಂಬ್ಯುಲೆನ್ಸ್-ಆಟೋ ಭೀಕರ ಅಪಘಾತ; ಆಟೋ ಚಾಲಕನಿಗೆ ಗಂಭೀರ ಗಾಯ!

(ನ್ಯೂಸ್‌ ಕಡಬ) newskadaba.com, ಸೆ. 24 . ಕಾಸರಗೋಡು ನಗರದ ಎಂ.ಜಿ. ರಸ್ತೆಯಲ್ಲಿ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಆಟೋರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಆಟೋ ಚಾಲಕ, ಅಡ್ಕತ್ ಬೈಲ್ ನಿವಾಸಿ ಎಂ.ಎ. ಅಬ್ದುಲ್ಲಾ ಕುಂಞಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ತೀವ್ರತೆಗೆ ಆಂಬ್ಯುಲೆನ್ಸ್‌ನ ಮುಂಭಾಗ, ಆಟೋರಿಕ್ಷಾ ಹಾಗೂ ಕಚೇರಿಯ ಗ್ರಿಲ್ ಸಂಪೂರ್ಣ ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Scroll to Top