ಸೆಪ್ಟೆಂಬರ್ 28 ರಿಂದ 30ರವರೆಗೆ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ: ಒಕ್ಕೂಟಗಳಿಂದ 3 ದಿನಗಳ ಮುಷ್ಕರ ಕರೆ

(ನ್ಯೂಸ್‌ ಕಡಬ) newskadaba.com,  ಸೆ.21 . ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28 ರಿಂದ 30ರವರೆಗೆ ಮೂರು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಶಾಖೆಗೆ ಭೇಟಿ ನೀಡಿ ಮಾಡಬೇಕಾದ ತುರ್ತು ಕೆಲಸಗಳನ್ನು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚಿಸಿದೆ.ಚೆಕ್ ಕ್ಲಿಯರೆನ್ಸ್, ಭೌತಿಕ ದಾಖಲೆಗಳ ಪರಿಶೀಲನೆ ಹಾಗೂ ಬ್ಯಾಂಕ್ ಸಿಬ್ಬಂದಿಯ ನೇರ ಸಹಾಯ ಅಗತ್ಯವಿರುವ ಸೇವೆಗಳಲ್ಲಿ ವಿಳಂಬ ಅಥವಾ ಅಡಚಣೆ ಉಂಟಾಗಬಹುದು.

ಮುಷ್ಕರದ ಅವಧಿಯಲ್ಲೂ ಎಟಿಎಂ ,ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, YONO ಆ್ಯಪ್ ಹಾಗೂ UPI ಸೇವೆಗಳು ಸಾಮಾನ್ಯ ರೀತಿಯಲ್ಲಿ ಲಭ್ಯವಿರಲಿವೆ.ಕೊನೆಯ ಮುಷ್ಕರದ ಬಳಿಕ, ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ಒಕ್ಕೂಟಗಳು ಘೋಷಿಸಿವೆ.

Scroll to Top