ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.21 . ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ.ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದರು.

ಈ ವೇಳೆ ನಜಮುನಿಸಾ ಬೇಗಂ ಮೇಲೆ ಕೋತಿ ದಾಳಿ ನಡೆಸಿ ತಳ್ಳಿದೆ. ಈ ಪರಿಣಾಮ ನಜಮುನಿಸಾ ಬೇಗಂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

Scroll to Top