
(ನ್ಯೂಸ್ ಕಡಬ) newskadaba.com, ಸೆ.21 . ಪ್ರಸಿದ್ಧ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ ‘ರಿಷಿ ಡಿಸೈನ್’ ಬೋಟಿಕ್ ಸಂಸ್ಥಾಪಕಿ ಪಲ್ಲವಿ ಅವರು ಹಠಾತ್ ನಿಧನರಾಗಿದ್ದಾರೆ. ಅವರ ಸಡನ್ ಅಗಲಿಕೆ ಕಿರುತೆರೆ ಲೋಕ ಹಾಗೂ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ.
ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ‘ರಿಷಿ ಡಿಸೈನ್’ ಬೋಟಿಕ್‌ನಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನಕ್ಕೆ ಪಲ್ಲವಿ ಆಸರೆಯಾಗಿದ್ದರು.ಮಲ್ಲಮ್ಮ ಅವರನ್ನು ಕೇವಲ ಉದ್ಯೋಗಿಯಾಗಿ ನೋಡದೆ ಕುಟುಂಬದ ಸದಸ್ಯೆಯಂತೆ ಪ್ರೀತಿಸುತ್ತಿದ್ದ ಪಲ್ಲವಿ, ಕಿರುತೆರೆ ನಟ ಮನೋಜ್ ಕುಮಾರ್ ಅವರೊಂದಿಗೆ ಸೇರಿ ಮಲ್ಲಮ್ಮ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವೇದಿಕೆ ಏರಲು ಮುಖ್ಯ ಕಾರಣಕರ್ತರಾಗಿದ್ದರು.

ಬಾಸ್‌ನಿಂದ ಹೊರಬಂದ ಮೇಲೆಯೂ ಮಲ್ಲಮ್ಮ ತಮ್ಮ ಪ್ರತಿಯೊಂದು ಸಂದರ್ಶನದಲ್ಲಿ “ನಮ್ಮ ಪಲ್ಲವಿ ಮೇಡಂ ಅಂದರೆ ನನಗೆ ತುಂಬಾ ಇಷ್ಟ, ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ” ಎಂದು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದರು.ಚಂದನವನ ಹಾಗೂ ಕಿರುತೆರೆಯ ಹಲವು ತಾರೆಯರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದ ಪಲ್ಲವಿ ಅವರ ಹಠಾತ್ ಅಗಲಿಕೆಗೆ ಕಿರುತೆರೆ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.




