ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ‘ನೋ ಸೆಲ್ಫಿ, ನೋ ರೀಲ್ಸ್’: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ!

(ನ್ಯೂಸ್ ಕಡಬ) newskadaba.com, ಸೆ. 19 . ಪ್ರವಾಸದ ಅವಧಿಯಲ್ಲಿ ಅಪಾಯಕಾರಿ ತಾಣಗಳು, ಜಲಮೂಲಗಳು ಹಾಗೂ ಬೆಟ್ಟ-ಗುಡ್ಡಗಳಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಹಾಗೂ ವೀಡಿಯೊ ರೀಲ್ಸ್‌ ಚಿತ್ರೀಕರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಶೈಕ್ಷಣಿಕ ಪ್ರವಾಸ ತೆರಳುವ ಮುನ್ನ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಪ್ರವಾಸದ ಪ್ರಸ್ತಾವನೆಯೊಂದಿಗೆ ಪೋಷಕರ ಅನುಮತಿ ಪತ್ರ ಹಾಗೂ ವಿದ್ಯಾರ್ಥಿಗಳ ಮುಚ್ಚಳಿಕೆ ಪತ್ರವನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು.ಪ್ರವಾಸದಲ್ಲಿ ಕನಿಷ್ಠ ಒಬ್ಬರು ಖಾಯಂ ಉಪನ್ಯಾಸಕರು ಇರಲೇಬೇಕು . ಗರಿಷ್ಠ 4 ಜನ ಅಧ್ಯಾಪಕರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಉಪನ್ಯಾಸಕಿಯರು ಮತ್ತು ಒಬ್ಬರು ‘ಗ್ರೂಪ್-ಡಿ’ ನೌಕರರು ಇರಬೇಕು.


ನಿಗದಿಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಕರೆದೊಯ್ಯುವಂತಿಲ್ಲ. ಪ್ರವಾಸದಲ್ಲಿ ಯಾವುದೇ ಅವಘಡ ಸಂಭವಿಸಿದರೆ ಸಂಬಂಧಪಟ್ಟ ವಿಭಾಗೀಯ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೇ ನೇರ ಹೊಣೆ.ಮಳೆಗಾಲದಲ್ಲಿ ಪ್ರವಾಸಕ್ಕೆ ಸಂಪೂರ್ಣ ತಡೆ ನೀಡಲಾಗಿದ್ದು, ನದಿ, ಸಮುದ್ರ, ಅರಣ್ಯ ಹಾಗೂ ಚಾರಣ ಪ್ರದೇಶಗಳಿಗೆ ಭೇಟಿ ನೀಡುವಾಗ ಸೂಕ್ತ ಸುರಕ್ಷತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.

Scroll to Top