(ನ್ಯೂಸ್ ಕಡಬ) newskadaba.com, ಸೆ.17 . ಭಾರೀ ಮಳೆಯಿಂದಾಗಿ ಜುಲೈ 8ರಿಂದ ತಾತ್ಕಾಲಿಕವಾಗಿ ಬಂದ್ ಆಗಿದ್ದ ಬೆಳ್ತಂಗಡಿಯ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ವನ್ಯಜೀವಿ ವಿಭಾಗವು ಮತ್ತೆ ಅನುಮತಿ ನೀಡಿದೆ.

ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ದಿನಕ್ಕೆ ಗರಿಷ್ಠ 500 ಪ್ರವಾಸಿಗರಿಗೆ ಮಾತ್ರ ಚಾರಣ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಚಾರಣಿಗರು ಅಧಿಕೃತ ವೆಬ್ಸೈಟ್ ಮೂಲಕವೇ ಮುಂಚಿತವಾಗಿ ನೋಂದಾಯಿಸಿ ಸ್ಲಾಟ್ ಕಾಯ್ದಿರಿಸಬೇಕು.
ನಿಗದಿತ ದಿನಾಂಕದಂದು ಪ್ರವೇಶ ಬಿಂದುವಿಗೆ ಆಗಮಿಸಿ, ನಿಗದಿಪಡಿಸಿದ ಶುಲ್ಕ ಪಾವತಿಸಿ ಚಾರಣ ಆರಂಭಿಸಬಹುದು ಎಂದು ಬೆಳ್ತಂಗಡಿ ವನ್ಯಜೀವಿ ಶ್ರೇಣಿ ಅಧಿಕಾರಿ ಶರ್ಮಿಷ್ಠಾ ತಿಳಿಸಿದ್ದಾರೆ.




