ಕೇಂದ್ರ ಸರ್ಕಾರದಿಂದ ಹೊಸ ನಿಯಮ

ಅಕ್ಟೋಬರ್ 1ರಿಂದ ಜನನ, ಮರಣ ತಡವಾದ ನೋಂದಣಿಗೆ ಕೋರ್ಟ್ ಆದೇಶ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಸೆ.17 . ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ತಡವಾಗಿ ನೋಂದಾಯಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ‘ಜನನ ಮತ್ತು ಮರಣ ನೋಂದಣಿ ಕಾಯ್ದೆ-2026’ ಅಡಿಯಲ್ಲಿ ನೂತನ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

2026ರ ಅಕ್ಟೋಬರ್ 1ರಿಂದ ನೂತನ ಕಾಯ್ದೆ ಅನುಷ್ಠಾನಗೊಳ್ಳಲಿದೆ.ಘಟನೆ ಸಂಭವಿಸಿ 1 ವರ್ಷ ಕಳೆದು 2 ವರ್ಷಗಳ ಒಳಗಾಗಿ ಅರ್ಜಿ ಸಲ್ಲಿಸಿದರೆ, ಜಿಲ್ಲಾಧಿಕಾರಿ , ಉಪವಿಭಾಗಾಧಿಕಾರಿ ಅಥವಾ ಅಧಿಕೃತ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶ ಹಾಗೂ ನಿಗದಿತ ಶುಲ್ಕ ಪಾವತಿ ಕಡ್ಡಾಯ.2 ವರ್ಷ ಮೀರಿದಲ್ಲಿ ಕಡ್ಡಾಯವಾಗಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಂದ ಪರಿಶೀಲನಾ ಆದೇಶ ಪಡೆಯುವುದು ಅಗತ್ಯ.

1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 13(3)ಕ್ಕೆ ತಿದ್ದುಪಡಿ ತರಲಾಗಿದೆ.ಘಟನೆಗಳು ಸಂಭವಿಸಿದ ತಕ್ಷಣವೇ ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿಸುವುದನ್ನು ಉತ್ತೇಜಿಸುವುದು.

Scroll to Top