ಯುಪಿಐ ಬಳಕೆದಾರರಿಗೆ ಆರ್‌ಬಿಐ ನಿಂದ ಸಿಹಿ ಸುದ್ದಿ

(ನ್ಯೂಸ್‌ ಕಡಬ) newskadaba.com, ಸೆ. 12. ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಬಳಕೆದಾರರಿಗಾಗಿ ಮುಂಬೈನಲ್ಲಿ ನಡೆದ Global Fintech Fest 2026 ರಲ್ಲಿ ಎರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆಫ್‌ಲೈನ್ ಪಾವತಿ ಹಾಗೂ ಸುಲಭ ಬೆಂಬಲ ಸೇವೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಿ POS (Point of Sale) ಸ್ಕ್ಯಾನರ್ ಮೇಲೆ ಟ್ಯಾಪ್ ಮಾಡುವ ಮೂಲಕ ಸರಳವಾಗಿ ಪಾವತಿ ಮಾಡಬಹುದು.NPCI ಅಭಿವೃದ್ಧಿಪಡಿಸಿದ ಸಣ್ಣ ಭಾಷಾ ಮಾದರಿ ಆಧಾರಿತ ಸಹಾಯ ವೇದಿಕೆಯಾಗಿದ್ದು, ಬಳಕೆದಾರರು ತಮ್ಮ ಎಲ್ಲಾ ಬ್ಯಾಂಕ್ ಅಕೌಂಟ್‌ಗಳು ಮತ್ತು ಆಟೋಪೇ ವಿವರಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಲು ಹಾಗೂ ವಂಚನೆ ತಡೆಯಲು ನೆರವಾಗುತ್ತದೆ.

ಅಂಗಡಿಗಳಲ್ಲಿ ₹5,000 ವರೆಗಿನ ವಹಿವಾಟುಗಳಿಗೆ ಯುಪಿಐ ಪಿನ್ ನಮೂದಿಸುವ ಅಗತ್ಯವಿರುವುದಿಲ್ಲ. ₹5,000 ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ಪಿಒಎಸ್ ಟರ್ಮಿನಲ್‌ನಲ್ಲಿ ಪಿನ್ ಹಾಕಬೇಕಾಗುತ್ತದೆ.

ಈ ನೂತನ ಫೀಚರ್‌ಗಳು ಗ್ರಾಹಕರಿಗೆ ತಮ್ಮ ಹಣಕಾಸು ವಹಿವಾಟಿನ ಮೇಲೆ ಹೆಚ್ಚಿನ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ನೀಡಲಿವೆ.

Scroll to Top