ಶಿವಮೊಗ್ಗ ರೌಡಿಶೀಟರ್ ಹತ್ಯೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

(ನ್ಯೂಸ್‌ ಕಡಬ) newskadaba.com,  ಸೆ. 07. ಶಿವಮೊಗ್ಗ ರೌಡಿಶೀಟರ್ ಹತ್ಯೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು ಭಾನುವಾರ ನಡೆದ ರೌಡಿಶೀಟರ್ ಕುಳ್ಳಿ ಕಿರಣ್ ಭೀಕರ ಹತ್ಯೆ ಸಂಬಂಧ ಇಂದು ಬೆಳ್ಳಂಬೆಳಗ್ಗೆ ಪ್ರಮುಖ‌ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ವಶಕ್ಕೆ ಪಡೆದ ಬಳಿಕ ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಲಾಗಿದೆ..

. ಕೊಲೆ ಪ್ರಕರಣದ ಪ್ರಮುಖ‌ ಆರೋಪಿ ಉಮೇಶ್ ನಾಯ್ಕ್ ಅಲಿಯಾಸ್ ಡಿಯೋ ಉಮೇಶ್ ಎಂಬಾತನ‌‌ ಕಾಲಿಗೆ ಫೈರಿಂಗ್ ಮಾಡಲಾಗಿದೆ. ನಿನ್ನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಗ್ರಾಮದಲ್ಲಿ ರೌಡಿಶೀಟರ್ ಕುಳ್ಳಿ ಕಿರಣ್​ನನ್ನು ಹತ್ಯೆ ಮಾಡಲಾಗಿತ್ತು.ಆರೋಪಿ ಉಮೇಶ್ ನಾಯ್ಕ್ ಶಿವಮೊಗ್ಗ ಹೊರವಲಯದ ಎನ್.ಆರ್.ಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಆತನನ್ನು ಬಂಧಿಸಿ ಕರೆತರುವಾಗ, ಶೌಚಾಲಯಕ್ಕೆ ಹೋಗುವುದಾಗಿ ಜೀಪ್​​ನಿಂದ ಇಳಿದು ಹೋಗುವಾಗ ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮಣ್ಣ ಅವರ ಮೇಲೆ‌ ಹಲ್ಲೆ ನಡೆಸಿ‌ ಪರಾರಿ ಆಗಲು ಯತ್ನಿಸಿದ್ದಾನೆ. ಆಗ ತುಂಗಾನಗರ ಇನ್ಸ್​ಪೆಕ್ಟರ್ ಗುರುರಾಜ್ ಎಚ್ಚರಿಕೆ‌ ನೀಡಿದರೂ ಸಹ ಲೆಕ್ಕಿಸದೆ ಪರಾರಿ ಆಗಲು ಮುಂದಾದಾಗ ಉಮೇಶನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to Top