ಮಂತ್ರಾಲಯ ಶ್ರೀಮಠದ ಹೆಸರಿನಲ್ಲಿ ಸೈಬರ್ ವಂಚನೆ: ಭಕ್ತರಿಗೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಸೆ. 07. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳ ಕುರಿತು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರಿಗೆ ನೀಡಿರುವ ಎಚ್ಚರಿಕೆ ಸಂದೇಶ..ಆರಾಧನಾ ಮಹೋತ್ಸವ, ಗುರು ವೈಭವೋತ್ಸವ ಹಾಗೂ ಸಾಮಾನ್ಯ ದಿನಗಳಲ್ಲಿಯೂ ಕೊಠಡಿ (ರೂಂ) ಬುಕ್ಕಿಂಗ್, ಪರಿಮಳ ಪ್ರಸಾದ ಮತ್ತು ದೇಣಿಗೆ ಸಂಗ್ರಹಣೆ ಹೆಸರಿನಲ್ಲಿ ನಕಲಿ ಜಾಲತಾಣಗಳು ಹಾಗೂ ವಾಟ್ಸ್‌ಆಪ್‌ ಮೂಲಕ ಭಕ್ತರಿಂದ ಹಣ ಪಡೆದು ವಂಚಿಸಲಾಗುತ್ತಿದೆ.

ಶ್ರೀಮಠದ ಹೆಸರಿನಲ್ಲಿ ಹಣ ಸಂಗ್ರಹಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ. ಮಠದಿಂದ ಯಾವುದೇ ದೇಣಿಗೆ ಕೇಳುವ ವ್ಯವಸ್ಥೆ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.ಪರಿಮಳ ಪ್ರಸಾದವನ್ನು ಆನ್‌ಲೈನ್ ಮೂಲಕ ತಲುಪಿಸುವ ಯಾವುದೇ ಅಧಿಕೃತ ಸೇವೆ ಶ್ರೀಮಠದಿಂದ ಲಭ್ಯವಿಲ್ಲ.

ಸೇವೆಗಳು, ಕೊಠಡಿ ಬುಕ್ಕಿಂಗ್ ಅಥವಾ ಮಾಹಿತಿಗಾಗಿ ಅನಧಿಕೃತ ವೆಬ್‌ಸೈಟ್‌/ಖಾಸಗಿ ವ್ಯಕ್ತಿಗಳನ್ನು ನಂಬದೆ, ನೇರವಾಗಿ ಶ್ರೀಮಠದ ಕಾರ್ಯಾಲಯ ಅಥವಾ ಆಡಳಿತ ಮಂಡಳಿಯನ್ನೇ ಸಂಪರ್ಕಿಸಲು ಸೂಚಿಸಲಾಗಿದೆ.

Scroll to Top